ಅಕ್ಷಯ ತೃತೀಯ| ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ ವಿಶೇಷ ಕೊಡುಗೆ

Update: 2025-04-25 20:18 IST
ಅಕ್ಷಯ ತೃತೀಯ| ಮಲಬಾರ್ ಗೋಲ್ಡ್ & ಡೈಮಂಡ್ಸ್ ನಿಂದ ವಿಶೇಷ ಕೊಡುಗೆ
  • whatsapp icon

ಬೆಂಗಳೂರು: ಹೆಸರಾಂತ ಚಿನ್ನಾಭರಣ ಮಳಿಗೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ಈ ಬಾರಿಯ ಅಕ್ಷಯ ತೃತೀಯಕ್ಕೆ ಹಲವು ಕೊಡುಗೆಗಳನ್ನು ಘೋಷಣೆ ಮಾಡಿದೆ.

ಅಕ್ಷಯ ತೃತೀಯ ಆಚರಣೆಯ ಭಾಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಗ್ರಾಹಕರಿಗೆ ಚಿನ್ನಾಭರಣ ಗಳ ಮೇಕಿಂಗ್ ಶುಲ್ಕದ ಮೇಲೆ ಶೇ.25 ರವರೆಗೆ, ಪ್ರೆಶಿಯಸ್ ಸ್ಟೋನ್ ಮತ್ತು ಅನ್‍ಕಟ್ ವಜ್ರಾಭರಣ ಗಳ ಮೇಕಿಂಗ್ ಶುಲ್ಕದ ಮೇಲೆ ಫ್ಲ್ಯಾಟ್ ಶೇ.25 ರಷ್ಟು ಹಾಗೂ ವಜ್ರದ ಮೌಲ್ಯದ ಮೇಲೆ ಶೇ.25 ರವರೆಗೆ ರಿಯಾಯ್ತಿಯನ್ನು ನೀಡುತ್ತಿದೆ. ಈ ಕೊಡುಗೆಗಳು ಗ್ರಾಹಕರಿಗೆ ಆಭರಣಗಳಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಒದಗಿಸುತ್ತವೆ.

ಖರೀದಿ ಅನುಭವವನ್ನು ಇನ್ನಷ್ಟು ಲಾಭದಾಯಕವಾಗಿಸಲು, ಮಲಬಾರ್ ಮುಂಗಡ ಬುಕಿಂಗ್‍ಗಳೊಂದಿಗೆ ಉಚಿತ ಬೆಳ್ಳಿ ನಾಣ್ಯವನ್ನು ನೀಡುತ್ತಿದೆ. ಗ್ರಾಹಕರು ಆಭರಣದ ಒಟ್ಟು ಮೌಲ್ಯದ ಕನಿಷ್ಠ ಶೇ.10 ರಷ್ಟನ್ನು ಪಾವತಿಸುವ ಮೂಲಕ ತಮ್ಮ ಆಭರಣಗಳನ್ನು ಬುಕ್ ಮಾಡಿಕೊಳ್ಳಬಹುದು ಮತ್ತು ಚಿನ್ನದ ಬೆಲೆ ಏರಿಕೆಯಿಂದ ಸುರಕ್ಷಿತವಾಗಿರಬಹುದಾಗಿದೆ. ಆ ಮೂಲಕ ಆಭರಣವನ್ನು ಬುಕ್ ಮಾಡಿದ ಸಂದರ್ಭದಲ್ಲಿ ಇರುವ ದರ ಅಥವಾ ಖರೀದಿಸುವ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ದರ; ಇದರಲ್ಲಿ ಯಾವುದು ಕಡಿಮೆ ಇರುತ್ತದೋ ಆ ದರದಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ.

ಅಕ್ಷಯ ತೃತೀಯದ ಶುಭ ಸಂದರ್ಭವನ್ನು ಇನ್ನೂ ಶ್ರೇಷ್ಠಗೊಳಿಸುವ ನಿಟ್ಟಿನಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ `ಡಿವೈನ್’ ಎಂಬ ವಿಶೇಷ ಬ್ರ್ಯಾಂಡ್ ಅಡಿಯಲ್ಲಿ `ತನ್ವಿಕ’ ಎಂಬ ಹೊಸ ಆಭರಣ ಸಂಗ್ರಹ ವನ್ನು ಅನಾವರಣಗೊಳಿಸಿದೆ. ಇದು ಭಕ್ತಿಯ ಚೈತನ್ಯವನ್ನು ಆಚರಣೆ ಮಾಡುವ ವಿನ್ಯಾಸಗಳನ್ನು ಒಳಗೊಂಡಿದೆ. ದೈವತ್ವದಿಂದ ಪ್ರೇರೇಪಿತವಾಗಿ ಮತ್ತು ಅತ್ಯುತ್ತಮ ಕರಕುಶಲತೆಯಿರುವ ಈ ಆಭರಣಗಳ ಸಂಗ್ರಹವು ಬೆರಗುಗೊಳಿಸುವ ಹೊಸ ವಿನ್ಯಾಸಗಳನ್ನು ಪ್ರಸ್ತುತಪಡಿಸುತ್ತದೆ.

ಈ ಹಬ್ಬದ ಕೊಡುಗೆಗಳ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, ``ಅಕ್ಷಯ ತೃತೀಯವು ಸಮೃದ್ಧಿ ಮತ್ತು ಹೊಸ ಆರಂಭಗಳ ದಿನವಾಗಿ ಅಪಾರ ಸಾಂಸ್ಕೃತಿಕ ಮಹತ್ವ ವನ್ನು ಹೊಂದಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ನಾವು ಈ ಸಂದರ್ಭವನ್ನು ನಮ್ಮ ಗ್ರಾಹಕ ರಿಗೆ ಇನ್ನಷ್ಟು ವಿಶೇಷವಾಗಿಸುವ ಗುರಿಯನ್ನು ಹೊಂದಿದ್ದೇವೆ. ಇದೇ ರೀತಿ ಸಾಟಿಯಿಲ್ಲದ ಮೌಲ್ಯ ಮತ್ತು ಕಾಲಾತೀತ ವಿನ್ಯಾಸಗಳನ್ನು ನೀಡುತ್ತೇವೆ. ನಮ್ಮ ವಿಶೇಷ ಕೊಡುಗೆಗಳು ಗ್ರಾಹಕರಿಗೆ ನಮ್ಮ ಕೃತಜ್ಞತೆ ಯನ್ನು ವ್ಯಕ್ತಪಡಿಸಲು ಮತ್ತು ನಮ್ಮ ಗ್ರಾಹಕರೊಂದಿಗೆ ಶಾಶ್ವತ ಸಂಬಂಧಗಳನ್ನು ನಿರ್ಮಾಣ ಮಾಡುವು ದನ್ನು ಮುಂದುವರಿಸಲು ಒಂದು ಉತ್ತಮ ಮಾರ್ಗವಾಗಿದೆ’’ ಎಂದರು.

ಅಕ್ಷಯ ತೃತೀಯವನ್ನು ಸಮೃದ್ಧಿಯನ್ನು ಸ್ವಾಗತಿಸುವ ಮತ್ತು ಹೊಸ ಆರಂಭಗಳನ್ನು ಗುರುತಿಸುವ ಸಮಯವೆಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಈ ಕೊಡುಗೆಗಳೊಂದಿಗೆ ಗ್ರಾಹಕರಿಗೆ ಹೊಂದಿ ಕೊಳ್ಳುವಂತಹ ಬುಕಿಂಗ್ ಆಯ್ಕೆಗಳೊಂದಿಗೆ ಮಲಬಾರ್ ಗೋಲ್ಡ್ & ಡೈಮಂಡ್ಸ್ ಹಬ್ಬದ ಅವಧಿಯಲ್ಲಿ ಗ್ರಾಹಕರಿಗೆ ಹೆಚ್ಚಿನ ಖರೀದಿಗೆ ಅವಕಾಶ ಒದಗಿಸಲಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News