ಮಂಗಳೂರು: ಪೋಪ್ ಫ್ರಾನ್ಸಿಸ್‌ಗೆ ಶ್ರದ್ಧಾಂಜಲಿ ಸಭೆ

ಮಂಗಳೂರು: ಮಂಗಳೂರು ಧರ್ಮಪ್ರಾಂತದ ವತಿಯಿಂದ ಕೆಥೋಲಿಕರ ಪರಮೋಚ್ಛ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ ಶ್ರದ್ಧಾಂಜಲಿ ಸಭೆಯು ಶುಕ್ರವಾರ ನಗರದ ಮಿಲಾಗ್ರಿಸ್ ಚರ್ಚ್ ಆವರಣದಲ್ಲಿ ನಡೆಯಿತು.
ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ ಪೋಪ್ ಫ್ರಾನ್ಸಿಸ್ ಜಗತ್ತಿಗೆ ಬೆಳಕಾಗಿದ್ದರು. ಮಕ್ಕಳು, ಯುವಕರು, ದೀನರು ಮತ್ತು ವಲಸಿಗರಿಗೆ ತುಂಬಾ ಹತ್ತಿರವಾಗಿದ್ದರು. ನಮಗೆ ಅವರು ಸಹೋದರತ್ವವನ್ನು ಕಲಿಸಿದ್ದರು ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಪೋಪ್ ಫ್ರಾನ್ಸಿಸ್ ಪ್ರೀತಿ, ಸರಳತೆಯ ಜೀವನದಿಂದಾಗಿ ಜಾಗತಿಕ ಸುಧಾರಣಾವಾದಿಯಾಗಿ ಗುರುತಿಸಿಕೊಂಡಿದ್ದರು. ನಾಡಿಗೆ ಪರಿಸರ ಪ್ರೀತಿ ಮತ್ತು ಸಹಬಾಳ್ವೆಯ ಪಾಠ ಮಾಡಿದ್ದರು. ಸಂಪ್ರದಾಯವಾದಿಯಾಗದೆ ಪವಿತ್ರ ಸಭೆಯಲ್ಲಿ ಬದಲಾವಣೆ, ನವೀನತೆಯೊಂದಿಗೆ ಜನರ ಪೋಪ್ ಎಂದೇ ಕರೆಯಲ್ಪಟ್ಟಿದ್ದರು. ಚರ್ಚ್ ಬಡವರ ಪರ ಇರಬೇಕೆಂದು ಸದಾ ಆಶಿಸಿದ್ದರು ಎಂದರು.
ಲೇಖಕಿ ಜ್ಯೋತಿ ಚೇಳಾಯಾರು ಉಪನ್ಯಾಸ ನೀಡಿದರು. ಮಂಗಳೂರು ಧರ್ಮಪ್ರಾಂತದ ವಿಶ್ರಾಂತ ಬಿಷಪ್ ಅ.ವಂ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ, ಮಾಜಿ ಸಚಿವ ಬಿ. ರಮಾನಾಥ ರೈ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಮಾಜಿ ಶಾಸಕ ಜೆ.ಆರ್. ಲೋಬೊ, ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಕಾರಿಗಳಾದ ವಂ.ಜೆ.ಬಿ. ಸಲ್ಡಾನ್ಹಾ, ರಾಯ್ ಕ್ಯಾಸ್ತಲಿನೊ, ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಟ್ಯಾನಿ ಆಳ್ವಾರಿಸ್, ಎಲಿಯಾಸ್ ಫೆರ್ನಾಂಡಿಸ್, ವಂ. ಫಾವುಸ್ತಿನ್ ಲೋಬೊ, ಜೋಯ್ಲಾಸ್ ಪಿಂಟೊ, ವಂ.ಡಾ. ಡೇನಿಯಲ್ ವೇಗಸ್, ವಂ. ಡಾ. ಜೋಸೆಫ್ ಮಾರ್ಟಿಸ್, ಶ್ರೀಕಾಂತ್ ಕಾಸರಗೋಡು ಮತ್ತಿತರರು ಉಪಸ್ಥಿತರಿದ್ದರು.
