ಭಯೋತ್ಪಾದಕರ ದಾಳಿ ಖಂಡಿಸಿ ದ.ಕ.ಜಿಲ್ಲೆಯ ಮಸೀದಿಗಳ ಮುಂದೆ ಪ್ರತಿಭಟನೆ
Update: 2025-04-25 22:21 IST

ಮಂಗಳೂರು : ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಭಯೋತ್ಪಾದ ಕರು ನಡೆಸಿದ ದಾಳಿಯನ್ನು ಖಂಡಿಸಿ ದ.ಕ.ಜಿಲ್ಲೆಯ ಬಹುತೇಕ ಮಸೀದಿಗಳ ಮುಂದೆ ಶುಕ್ರವಾರ ಜುಮಾ ನಮಾಝ್ ಬಳಿಕ ಪ್ರತಿಭಟನೆ ನಡೆಯಿತು.
ಮಸೀದಿಯ ಖತೀಬರು, ಆಡಳಿತ ಕಮಿಟಿಯ ಪದಾಧಿಕಾರಿಗಳು, ಮದ್ರಸದ ಶಿಕ್ಷಕರು, ವಿದ್ಯಾರ್ಥಿಗಳು, ಜಮಾಅತರು ನಮಾಝ್ ಬಳಿಕ ಪ್ರತಿಭಟನೆ ನಡೆಸಿದರು. ಭಯೋತ್ಪಾದಕರ ಅಟ್ಟಹಾಸವನ್ನು ಖಂಡಿಸಿ ಘೋಷಣೆ ಕೂಗಿದರು. ಭಿತ್ತಿಪತ್ರ ಪ್ರದರ್ಶಿಸಿದರು. ಕೇಂದ್ರ ಸರಕಾರದ ವೈಫಲ್ಯದ ವಿರುದ್ಧ ಕಿಡಿಕಾರಿದರು. ಭಯೋತ್ಪಾದಕರ ದಾಳಿಗೆ ಬಲಿಯಾದವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.