ಉಳ್ಳಾಲ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಕೇಂದ್ರ: ಅಬ್ದುಲ್ ರಹ್ಮಾನ್ ಮದನಿ

ಉಳ್ಳಾಲ: ಉಳ್ಳಾಲ ದರ್ಗಾ ಉರೂಸ್ ಬಂದರೆ ಭಾರತದ ಜನತೆಗೆ ಸಂತಸವಾಗುತ್ತದೆ. ದೂರದ ಊರಿನಿಂದ ಬಂದ ಭಕ್ತಾದಿಗಳಿಗೆ ಉಳಕೊಳ್ಳಲು ಇಲ್ಲಿ ಸೌಲಭ್ಯ ಇದೆ. ಇಲ್ಲಿ ಶೈಕ್ಷಣಿಕ ಕೇಂದ್ರ ಅಭಿವೃದ್ಧಿ ಆಗಲು ತಾಜುಲ್ಉ ಲಮಾ ಕಾರಣರು ಎಂದು ಉಡುಪಿ ಸಹಾಯಕ ಖಾಝಿ ಮೂಳೂರು ಅಬ್ದುಲ್ ರಹ್ಮಾನ್ ಮದನಿ ಹೇಳಿದರು.
ಅವರು ಖುತ್ ಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ಅವರ ಹೆಸರಿನಲ್ಲಿ ಉಳ್ಳಾಲ ದರ್ಗಾ ವಠಾರದಲ್ಲಿ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ಅಧ್ಯಕ್ಷತೆಯಲ್ಲಿ ನಡೆಯುವ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಶುಕ್ರವಾರ ಧಾರ್ಮಿಕ ಉಪನ್ಯಾಸ ನೀಡಿದರು.
ಉಳ್ಳಾಲ ಈಗ ಒಂದು ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಕೇಂದ್ರ ಆಗಿಬಿಟ್ಟಿದೆ.ಇದನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ ನಮ್ಮಲ್ಲಿ ಇದೆ ಎಂದರು.
ಅಲ್ಲಾಹನು ಭೂಮಿ ಯಲ್ಲಿ ವಿವಿಧ ವಸ್ತುಗಳನ್ನು ಸೃಷ್ಟಿ ಮಾಡಿರುವುದು ಮನುಷ್ಯರಿಗಾಗಿ.ಮನುಷ್ಯನ ಬದುಕಿಗೆ ಅನುಕೂಲವಾದ ವ್ಯವಸ್ಥೆ ಭೂಮಿಯಲ್ಲಿ ಇದೆ ಎಂದು ಅವರು ಹೇಳಿದರು.
ಶಾಕಿರ್ ಬಾಖವಿ ಮಂಬಾಡಿ ಧಾರ್ಮಿಕ ಉಪನ್ಯಾಸ ನೀಡಿದರು.
ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಮಾಜಿ ಖತೀಬ್ ಅಬ್ದುಲ್ ರವೂಫ್ ಮುಸ್ಲಿಯಾರ್ ದುಆ ನೆರವೇರಿಸಿದರು.