ಉಪ್ಪಿನಂಗಡಿ: ಪಹಲ್ಗಾಮ್‍ನಲ್ಲಿ ಉಗ್ರರ ದಾಳಿ ಖಂಡಿಸಿ ಪ್ರತಿಭಟನೆ

Update: 2025-04-25 22:46 IST
ಉಪ್ಪಿನಂಗಡಿ: ಪಹಲ್ಗಾಮ್‍ನಲ್ಲಿ  ಉಗ್ರರ ದಾಳಿ ಖಂಡಿಸಿ ಪ್ರತಿಭಟನೆ
  • whatsapp icon

ಉಪ್ಪಿನಂಗಡಿ: ಜಮ್ಮು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಹಿಂದೂ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ  ಉಪ್ಪಿನಂಗಡಿಯಲ್ಲಿ ಎ.25ರಂದು ಸಂಜೆ ಪ್ರತಿಭಟನೆ ಹಾಗೂ ಉಗ್ರರ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಕ ಸಭೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ಮೊದಲಿಗೆ ಹಣತೆ ಬೆಳಗಿ ಉಗ್ರರ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಮತಾಂಧ ಶಕ್ತಿಗಳು ಈ ದೇಶದ ಏಕತೆ ಮತ್ತು ಅಖಂಡತೆಗೆ ಸವಾಲು ಹಾಕುವ ಕೆಲಸ ಮಾಡುತ್ತಿದ್ದು, ಹಿಂದೂ ಧರ್ಮವನ್ನೇ ಟಾರ್ಗೆಟ್ ಮಾಡಿ ಕಾಶ್ಮೀರದ ಪಹಲ್ಗಾಮ್‍ನಲ್ಲಿ 27 ಜನರನ್ನು ಅಮಾನುಷವಾಗಿ ಕೊಲ್ಲುವ ಕೆಲಸ ಮಾಡಿದ್ದಾರೆ. ಇಂಥ ಉಗ್ರವಾದಿಗಳಿಗೆ ಹಾಗೂ ಅವರಿಗೆ ಬೆಂಬಲ ನೀಡುವ ಶಕ್ತಿಗಳಿಗೆ ಹಿಂದೂ ಸಮಾಜದ ಯುವಕರು ಜಾತಿ, ಮತ ಬದಿಗಿಟ್ಟು ರಾಷ್ಟಕ್ಕಾಗಿ ಸಮರ್ಪಣೆಗೆ ಮುಂದಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು- ಕಾಶ್ಮೀರದಲ್ಲಿದ್ದ 370 ವಿಧಿಯನ್ನು ತೆಗೆಯುವ ಮೂಲಕ ಭಯೋತ್ಪಾದಕರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡಿದ್ದಾರೆ. ಇದೀಗ ಮತ್ತೆ ಭಯೋತ್ಪಾದಕ ಶಕ್ತಿಗಳು ಹಿಂದೂ ಧರ್ಮದವರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಇಂಥ ವಿಚಿಧ್ರಕಾರಿ ಶಕ್ತಿಗಳನ್ನು ಹೊಸಕಿ ಹಾಕುವ ಕೆಲಸ ಪ್ರಧಾನಿ ನರೇಂದ್ರ ಮೋದಿಯವರಿಂದ ನಡೆಯಲಿದೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಕೆಲಸವೂ ನಡೆಯಲಿದೆ. ಆದ್ದರಿಂದ ಪ್ರಧಾನಿಯವರಿಗೆ ನಾವೆಲ್ಲಾ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದರು.

ಮುರಳೀಕೃಷ್ಣ ಹಸಂತಡ್ಕ, ಅರುಣ್ ಕುಮಾರ್ ಪುತ್ತಿಲ ಮಾತನಾಡಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಎನ್. ಉಮೇಶ್ ಶೆಣೈ, ಸುನೀಲ್ ಕುಮಾರ್ ದಡ್ಡು, ಚಿದಾನಂದ ಪಂಚೇರು, ರಾಜೇಶ್ ಕೊಡಂಗೆ, ಸುಜೀತ್ ಬೊಳ್ಳಾವು, ಸಂದೀಪ್ ಕುಪ್ಪೆಟ್ಟಿ, ರಾಧಾಕೃಷ್ಣ ಭಟ್ ಬೊಳ್ಳಾವು, ಯು. ರಾಮ, ವಿಶ್ವನಾಥ ಶೆಟ್ಟಿ ಕಂಗ್ವೆ, ಧನಂಜಯ ನಟ್ಟಿಬೈಲು, ಚಂದ್ರಶೇಖರ ಮಡಿವಾಳ, ಚಂದ್ರಶೇಖರ ತಾಳ್ತಜೆ, ಜಯಂತ ಪೊರೋಳಿ, ರಾಜಗೋಪಾಲ ಭಟ್ ಕೈಲಾರು, ಪುರುಷೋತ್ತಮ ಮುಂಗ್ಲಿಮನೆ, ಮನೀಷ್, ಹರೀಶ್ ಪಟ್ಲ, ಪ್ರಸಾದ್ ಭಂಡಾರಿ, ರಾಮಚಂದ್ರ ಪೂಜಾರಿ, ಗಂಗಾಧರ ಪಿ.ಎನ್., ಸುದರ್ಶನ್, ಹರಿರಾಮಚಂದ್ರ, ಉದಯ ಅತ್ರೆಮಜಲು, ಮಹೇಶ್ ಬಜತ್ತೂರು, ಸಂತೋಷ್ ಕರ್ಲಾಪು, ಕಿಶೋರ್ ಬಜತ್ತೂರು, ರವಿನಂದನ್ ಹೆಗ್ಡೆ, ಜಯರಾಮ ಆಚಾರ್ಯ, ರವಿ ಇಳಂತಿಲ, ಮೂಲಚಂದ್ರ ಕಾಂಚನ, ಕೈಲಾರ್ ಸತ್ಯನಾರಾಯಣ ಭಟ್, ಡಾ. ಗೋವಿಂದ ಪ್ರಸಾದ್ ಕಜೆ, ಪ್ರಶಾಂತ್ ನೆಕ್ಕಿಲಾಡಿ, ಶರತ್ ಕೋಟೆ, ಶ್ರೀರಾಮ ಭಟ್ ಪಾತಾಳ, ಡಾ. ಶಿವರಾಮ ಭಟ್, ರವೀಂದ್ರ ಆಚಾರ್ಯ, ಹೇರಂಭ ಶಾಸ್ತ್ರಿ, ಗಿರೀಶ್ ಕುಂದರ್, ಗೋಪಾಲಕೃಷ್ಣ ದುರ್ಗಾಗಿರಿ ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಅತ್ರೆಮಜಲು ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News