ಪೋಪ್ ಫ್ರಾನ್ಸಿಸ್ ಭಾತೃತ್ವದ ಸಂದೇಶ ಸಾರಿದವರು: ಡಾ.ಸುರೇಶ್ ನೆಗಳಗುಳಿ

ಮಂಗಳೂರು, ಎ.27: ಇತ್ತೀಚೆಗೆ ನಿಧನರಾದ ಕೆಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರಿಗೆ ಪಿಂಗಾರ ಬಳಗದ ವತಿಯಿಂದ ಗೌರವ ನಮನ ಕಾರ್ಯಕ್ರಮ ನಗರದ ಬಿಷಪ್ ಹೌಸ್ ಚರ್ಚ್ ಬಿಲ್ಡಿಂಗ್ ನಲ್ಲಿ ನಡೆಯಿತು.
ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಡಾ.ಸುರೇಶ ನೆಗಳಗುಳಿ ಮಾತನಾಡಿ, ಮನುಕುಲದ ಸೇವೆಗೆ ಬದುಕು ಮುಡಿಪಾಗಿರಿಸಿದ ಪೋಪ್ ಫ್ರಾನ್ಸಿಸ್ ವಿಶ್ವ ಭಾತೃತ್ವದ ಸಂದೇಶ ಪಸರಿಸಿದ ಮಹಾನ್ ಚೇತನ ಎಂದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ, ಶಾಂತಿ, ಸಹಬಾಳ್ವೆಯ ಜತೆಗೆ ಪರಿಸರ ಜಾಗೃತಿ ಮೂಡಿಸಿದ ಪೋಪ್ ಫ್ರಾನ್ಸಿಸ್ ತಮ್ಮ ಸೇವೆಯ ಮೂಲಕ ವಿಶ್ವದೆಲ್ಲೆಡೆ ಜನತೆಯ ಪ್ರೀತಿ ಸಂಪಾದಿಸಿದ್ದರು ಎಂದರು.
ಅನುಪಮ ಮಾಸಿಕದ ಮುಹಮ್ಮದ್ ಮೊಹ್ಸಿನ್, ಕೊಂಕಣಿ ಭಾಷಾ ಮಂಡಳ್ ಅಧ್ಯಕ್ಷ ಕೆ.ವಸಂತ ರಾವ್ ನುಡಿ ನಮನ ಸಲ್ಲಿಸಿದರು.
ಉದ್ಯಮಿ ಎಡೋಲ್ಫ ಡಿಸೋಜ, ಗೋಲ್ಡಿನ್ ಡಿಸೋಜ, ಡೋಲ್ಫಿ ಡಿಸೋಜ ಉಪಸ್ಥಿತರಿದ್ದರು.
ಪೋಪ್ ಫ್ರಾನ್ಸಿಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಲಾಯಿತು.
ಪಿಂಗಾರ ಬಳಗದ ಮುಖ್ಯಸ್ಥ ರೇಮಂಡ್ ಡಿಕುನ್ಹಾ ಸ್ವಾಗತಿಸಿದರು.
ರಿಯಾನಾ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿದರು.