ದುಬೈ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ವಾರ್ಷಿಕ ಮಹಾಸಭೆ
Update: 2025-04-27 19:43 IST

ಮಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರ ಹಾಗೂ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವ ಕುಮಾರ ಅತಿವಾಲೆ, ಶಿವರೆಡ್ಡಿ ಖ್ಯಾಡೆದ್‌ರ ಉಪಸ್ಥಿತಿಯಲ್ಲಿ ದುಬೈಯಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ವಾರ್ಷಿಕ ಮಹಾಸಭೆ ನಡೆಯಿತು.
ಸಭೆಯಲ್ಲಿ ಜಿಸಿಸಿ ಸಲಹಾ ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ಶಾ ಮಾಂತೂರ್, ಯುಎಇ ಘಟಕದ ಗೌರವ ಅಧ್ಯಕ್ಷರಾಗಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ, ಅಧ್ಯಕ್ಷರಾಗಿ ಅಮರ್ ಕಲ್ಲುರಾಯ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಬಾಜೂರಿ, ಕೊಶಾಧಿಕಾರಿಯಾಗಿ ಅಶ್ರಫ್ ಬಾಯಾರ್ ಆಯ್ಕೆಯಾದರು.
ಗಡಿನಾಡು ಸಾಂಸ್ಕೃತಿ ಅಕಾಡಮಿಯ ಕೇಂದ್ರ ಸಮಿತಿಯ ಕೋಶಾಧಿಕಾರಿ ಝೆಡ್.ಎ. ಕಯ್ಯಾರ್ ಹಾಗೂ ಉದ್ಯಮಿ ಶಿವಶಂಕರ ನೆಕ್ರಾಜೆ, ಯೂಸುಫ್ ಶೇಣಿ, ಪಿ.ಪಿ.ಮಂಜುನಾಥ ಕಾಸರಗೋಡು, ಅಲಿಸಾಗ್ ವಿಜಯಕುಮಾರ ಶೆಟ್ಟಿ ಗಾಣದಮೂಲೆ ಉಪಸ್ಥಿತರಿದ್ದರು.