ಮಂಗಳೂರು ನಗರದಲ್ಲಿ ಗುಡುಗು ಸಹಿತ ಮಳೆ
Update: 2025-04-27 22:08 IST

ಮಂಗಳೂರು : ನಗರದಲ್ಲಿ ರವಿವಾರ ರಾತ್ರಿ ಗುಡುಗು ಸಹಿತ ಮಳೆ ಸುರಿದಿದೆ.
ಹಗಲು ಬಿಸಿಲು ಇತ್ತು. ಸಂಜೆ ಹೊತ್ತಿಗೆ ಮಳೆ ಸುರಿದಿದೆ. ದ.ಕ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿದ ಬಗ್ಗೆ ವರದಿಯಾಗಿದೆ.
ಮಳೆಯೊಂದಿಗೆ ವಾತಾವರಣ ತಂಪಾಗಿದೆ. ಬಿಸಿ ವಾತಾವರಣ ನಿವಾರಣೆಯಾಗಿದೆ. ಕೆಲವು ದಿನಗಳಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳುತ್ತಿದೆ.