×
Ad

ಹೃದಯ ಶುದ್ಧಿ ಇಲ್ಲವಾದರೆ ಬದುಕು ಯಶಸ್ಸು ಆಗದು: ಹಂಝ ಸಖಾಫಿ

Update: 2025-04-27 23:32 IST

ಉಳ್ಳಾಲ: ಆತ್ಮೀಯತೆ ಮತ್ತು ಪಂಡಿತರು ಇದಕ್ಕೆ ಸಮಾಜದಲ್ಲಿ ಪ್ರಾಧಾನ್ಯತೆ ಇದೆ. ನಾವು ಜೀವನ ದಲ್ಲಿ ಆತ್ಮೀಯತೆ ಕಳೆದುಕೊಳ್ಳುತ್ತಿದ್ದೇವೆ. ಇಸ್ಲಾಮಿನಲ್ಲಿ ಆತ್ಮೀಯತೆ, ಈಮಾನ್ ಬಗ್ಗೆ ಕಲಿಸಲಾಗಿದೆ ಎಂದು ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಹೇಳಿದರು.

ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ರವಿವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಭೂಮಿಯಲ್ಲಿರುವ ವಿವಿಧ ಜೀವಿಗಳಲ್ಲೂ ಆತ್ಮೀಯತೆ ಎಂಬುದು ಇರುತ್ತದೆ.ಅದೇ ರೀತಿ ಮನುಷ್ಯರಲ್ಲೂ ಆತ್ಮೀಯತೆ ಇರಬೇಕು.ಆತ್ಮೀಯತೆ ಹೃದಯದಲ್ಲಿ ಇದ್ದರೆ ಜನರ ಬದುಕಿನಲ್ಲಿ ಯಾವುದೇ ತೊಂದರೆ ಬರುವುದಿಲ್ಲ. ಹೃದಯ ಶುದ್ಧಿ ಇಲ್ಲವಾದರೆ ಬದುಕು ಯಶಸ್ಸು ಕೂಡಾ ಆಗುವುದಿಲ್ಲ ಎಂದರು.

ನಮ್ಮ ಬದುಕು ಸ್ವಾರ್ಥ ಆಗಿರಬಾರದು.ಇದನ್ನು ಇಸ್ಲಾಮ್ ಈ ಹಿಂದೆಯೇ ಸಾರಿದೆ. ಹೃದಯ ಶುದ್ಧಿ ಮಾಡಿ ನಿಸ್ವಾರ್ಥ ಬದುಕು ಸಾಧಿಸುವ ವ್ಯಕ್ತಿ ವಿಜಯಿಯಾಗುತ್ತಾನೆ ಎಂಬ ವಿಚಾರ ನಮಗೆ ತಿಳಿದಿರ ಬೇಕು.ಇದಕ್ಕಾಗಿ ನಾವು ಪ್ರಾರ್ಥನೆ ಗಳನ್ನು, ನಮಾಝ್ ಗಳನ್ನು ಜಾಸ್ತಿ ನಿರ್ವಹಿಸಬೇಕು ಎಂದರು.

ಮುಹ್ ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಧಾರ್ಮಿಕ ಪ್ರವಚನ ನೀಡಿದರು. ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಅಲ್ ಅಹ್ದಲ್ ಕಣ್ಣವಂ ದುಆ ನೆರವೇರಿಸಿದರು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದರ್ಗಾ ಮಾಜಿ ಅಧ್ಯಕ್ಷ ಯು.ಎಸ್. ಹಂಝ,ಅಳೇಕಲ ಮಸೀದಿಯ ಸಹಾಯಕ ಖತೀಬ್ ಇರ್ಫಾನ್ ಸ ಅದಿ, ಒಂಬತ್ತು ಕೆರೆ ಮಸೀದಿ ಖತೀಬ್ ಹಬೀಬುರ್ರಹ್ಮಾನ್ ಅಲ್ ಫಾಳಿಲಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ,ಅಹ್ಮದ್ ಬಾವ ಅಳೇಕಲ, ಜಲಾಲ್ ತಂಙಳ್, ಅಝಾದ್ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.

ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News