ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಮಂಗಳೂರು : ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಅಲ್ ವಫಾ ಚಾರಿಟೆಬಲ್ ಟ್ರಸ್ಟ್ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆಗಸ್ಟ್ 23ರಂದು ಬಂಟ್ವಾಳ ತಾಲೂಕಿನ ನೇರಳಕಟ್ಟೆಯಲ್ಲಿರುವ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿರುವ ಸಾಮೂಹಿಕ ವಿವಾಹಕ್ಕೆ ಆಸಕ್ತ ವಧುವಿನ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸವಾಗಿರುವ ವಧುವಿನ ಕುಟುಂಬಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಆಯ್ದ ವಧುವಿಗೆ ಮದುವೆಯ ವಸ್ತ್ರ, ಮೂರು ಪವನ್ ಚಿನ್ನಾಭರಣ ಹಾಗೂ ಮದುವೆಯ ಖರ್ಚನ್ನು ಟ್ರಸ್ಟ್ ಭರಿಸಲಿದೆ. ಅನಾಥ, ಅಂಗವಿಕಲ, ಆರ್ಥಿಕ ಹಿಂದುಳಿಕೆ ಹಾಗೂ ಮದುವೆಯ ವಯಸ್ಸು ಮೀರಿರುವ ವಧುವಿಗೆ ಆದ್ಯತೆ ನೀಡಲಾಗುವುದು.
ಆಸಕ್ತರು ನಿಗದಿತ ಅರ್ಜಿ ನಮೂನೆ ಪಡೆಯಲು ಹಾಗೂ ಅರ್ಜಿ ಸಲ್ಲಿಸಲು ಜೂನ್ 30ರ ಒಳಗಾಗಿ ಕೆ.ಎಸ್.ಅಬೂಬಕರ್ (ಮೊ.ಸಂ: 9845662169) ಪಿ.ಮುಹಮ್ಮದ್ (ಮೊ.ಸಂ: 9743266456) ಅಥವಾ ಬಿ.ಎ.ಶುಕೂರ್ (ಮೊ.ಸಂ: 9448216149) ಇವರನ್ನು ಸಂಪರ್ಕಿಸಬಹುದು ಎಂದು ಅಲ್ ವಫಾ ಚಾರಿಟೆಬಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.