ಉಳ್ಳಾಲ: ಭಾರಿ ಮಳೆ; ಮರ ಬಿದ್ದು ಮನೆಗೆ ಹಾನಿ
Update: 2025-04-28 17:02 IST

ಉಳ್ಳಾಲ: ರವಿವಾರ ರಾತ್ರಿ ಸುರಿದ ಭಾರಿ ಮಳೆಗೆ ಅಂಬ್ಲಮೊಗರು ಗ್ರಾಮದ ಗಾಂಧಿ ನಗರ ನಿವಾಸಿ ರಿಯಾಝ್ ಎಂಬವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಮನೆಮಂದಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
