ಸುರತ್ಕಲ್ : "ಖಿಲ್‌ರಿಯಾ ಮೌಲೂದ್ ನೇರ್ಚೆ" ಸಮಾರೋಪ‌ ಸಮಾರಂಭ

Update: 2025-04-28 19:21 IST
ಸುರತ್ಕಲ್ : "ಖಿಲ್‌ರಿಯಾ ಮೌಲೂದ್ ನೇರ್ಚೆ" ಸಮಾರೋಪ‌ ಸಮಾರಂಭ
  • whatsapp icon

ಸುರತ್ಕಲ್ : ಇಲ್ಲಿನ ಇಡ್ಯಾ ಖಿಲ್ರಿಯಾ ಮಸೀದಿ ಮತ್ತು ಮದ್ರಸ (ರಿ.) ವತಿಯಿಂದ ಅಬಿಲ್ ಅಬ್ಬಾಸ್ ಖಿಲ್ರ್ ನೆಬಿ (ಅ.ಸ.) ಅವರ ಹೆಸರಿನಲ್ಲಿ‌ ನಡೆಸಿಕೊಂಡು ಬರುತ್ತಿರುವ 64ನೇ ವರ್ಷದ "ಖಿಲ್‌ರಿಯಾ ಮೌಲೂದ್ ನೇರ್ಚೆ"ಯ ಸಮಾರೋಪ‌ ಸಮಾರಂಭ ಶನಿವಾರ ರಾತ್ರಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ. ಮೊಗವೀರ ಮಹಾಜನ ಸಂಘ (ರಿ) ಉಚ್ಚಿಲ ಇದರ ಅಧ್ಯಕ್ಷ ಗಂಗಾಧರ ಗುರಿಕಾರ, ಸರ್ವಧರ್ಮಗಳು ಸೌಹಾರ್ದವನ್ನಷ್ಟೇ ಬೋಧಿಸಿದೆ. ಕೋಮು ಸಂಘರ್ಷಗಳು ನಡೆದರೆ, ಮುಖಂಡರು ಅವರ ಮಕ್ಕಳು ಆರಾಮವಾಗಿರುತ್ತಾರೆ. ಆದರೆ, ಬಡಪಾಯಿಗಳ ಮಕ್ಕಳು ಹೊಡೆದಾಡಿ ಸಾಯುತ್ತಾರೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವಕರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಯುವಕ ರಿಗೆ ಧರ್ಮದ ನಿಜವಾದ ತಿರುಳು ತಿಳಿಯುತ್ತಿಲ್ಲ. ಹಾಗಾಗಿ ಎಲ್ಲಾ ಧರ್ಮಗಳು, ಸಮುದಾಯಗಳ ಹಿರಿ ಯರು, ಧರ್ಮಗುರುಗಳು ಧರ್ಮ ಮತ್ತು ಅದರ ನೈಜ ಆಶಯಗಳನ್ನು ತಮ್ಮ ಯುವ ಸಮುದಾಯಕ್ಕೆ ತಿಳಿ ಹೇಳಿದರೆ ಸೌಹಾರ್ದ ಭಾರತ ನಿರ್ಮಾಣವಾಗುತ್ತದೆ. ಎಲ್ಲಾ ಧರ್ಮಗಳ ಸಮಾರಂಭಗಳಿಗೆ ಸರ್ವ ಧರ್ಮಿಯರನ್ನು ಆಮಂತ್ರಿಸಿ ಆಮೂಲಕ ಆಯಾ ಧರ್ಮಗಳ ತಿರುಳನ್ನು ಸರ್ವರಿಗೂ ಹಂಚಿದರೆ ದೇಶದಲ್ಲಿ ಕೋಮುಸಂಘರ್ಷಗಳನ್ನು ಇಲ್ಲದಾಗಿಸಬಹುದು ಎಂದು ನುಡಿದರು.

ಪತ್ತೂರು ಕುಂಬ್ರದ ಕೆ.ಐ.ಸಿ. ಪ್ರಾಧ್ಯಾಪಕ ಅನೀಸ್‌ ಕೌಸರಿ ಮಾತನಾಡಿ, ದೇಶ ದುಖಃದಲ್ಲಿದೆ. ಯಾರೋ ಮಾಡುವ ಅನಾಚಾರಗಳನ್ನು ನಿರ್ದಿಷ್ಟ ಒಂದು ಸಮುದಾಯದ ಮೇಲೆ ಹೇರಿ ಅದನ್ನು ತಪ್ಪಿತಸ್ತ ಸ್ಥಾನ ದಲ್ಲಿ ನಿಲ್ಲಿಸುವ ಹುನ್ನಾರಗಳು ನಡೆಯುತ್ತಿದೆ. ಇದೇ ಸಂದರ್ಭ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮ ತಪ್ಪಿತಸ್ತರೆಂದು ಹೇಳಲು ಹೊರಟಿರುವ ಸಮುದಾಯದ ಮಾನವೀಯ ಕೆಲಸಗಳನ್ನು ಮರೆಮಾಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾರಂಭವನ್ನು ಸುರತ್ಕಲ್ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಉಸ್ಮಾನ್ ಫಾಳಿಲಿ ಅಲ್ ಹಿಕಮಿ ಉದ್ಘಾಟಿಸಿದರು. ಇರ್ಷಾದ್‌ ದಾರಿಮಿ ಅಲ್‌ ಜಝರಿ ಮಿತ್ತಬೈಲ್‌ ದುಆ ನೆರವೇರಿಸಿದರು. ಅಲ್‌ ಹಾಜ್‌ ಮುಹಮ್ಮದ್‌ ಅಝ್‌ ಹರ್‌ ಫೈಝಿ ಬೊಳ್ಳೂರು ಉಸ್ತಾದ್‌ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್‌ ನಜ್ಮುದ್ದೀನ್‌ ಪೂಕೋಯ ತಂಙಳ್‌ ಅಲ್‌ ಹೈದ್ರೋಸ್‌ ಕೇರಳ ದುವಾ ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಸುರತ್ಕಲ್‌ ಈದ್ಗಾ ಮತ್ತು ಮುಹಿಯುದ್ದೀನ್‌ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಮುಸ್ತಫ, ಇಡ್ಯಾ ಖಿಲ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅಬೂಬಕ್ಕರ್ ಕೃಷ್ಣಾಪುರ, ದ.ಕ. ವಕ್ಫ್‌ ಸಲಹಾ ಸಮಿತಿಯ ಉಪಾಧ್ಯಕ್ಷ ಪಕೀರಬ್ಬ ಮಾಸ್ಟರ್‌, ಎಸ್ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬ್ದುಲ್‌ ಜಲೀಲ್‌ ಕೆ., ಮಂಗಳೂರು ಫ್ಲವರ್‌ ಕಾರ್ಮಿಕರ ಸಂಘದ ಅಧ್ಯಕ್ಷ ಹಂಝ ಕುದ್ರೋಳಿ, ಸುರತ್ಕಲ್‌ ಬದ್ರಿಯಾ ನಗರ ಮಸ್ಜಿದುನ್ನೂರ್‌ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಹಮ್ಮದ್‌ ಶರೀಫ್‌, ಉದ್ಯಮಿಗಳಾದ ಅಬ್ದುಲ್‌ ಹಕ್‌, ಕೆ. ಅಬ್ದುಲ್‌ ರಝಾಕ್‌, ಇಡ್ಯಾ ಗಲ್ಫ್‌ ಫೋರಂ ಕಾರ್ಯದರ್ಶಿ ಅರಾಫತ್‌ ಎಂ.ಎಸ್.‌, ವೇವ್ಸ್‌ ಇಡ್ಯಾದ ಮುಹಮ್ಮದ್‌ ಅಶ್ರಫ್‌, ನೌಶಾದ್‌ ಎನ್‌ಎಂಪಿಎ ಪಣಂಬೂರು, ಗುಲಾಮ್‌ ಮೊಯ್ದೀನ್‌ ಚೈಯಾಕ, ಕುಂದಾಪುರ ನಾವುಂದ ಬದ್ರಿಯಾ ಫಿಶರಿಶ್‌ ಮಾಲಕ ಶಂಶುದ್ದೀನ್‌, ಸೂಪ್ಪರ್‌ ಶೈನ್‌ ಸ್ಪೋಟ್ಸ್‌ ಕ್ಲಬ್‌ ಅಧ್ಯಕ್ಷ ಆಲಿಯಬ್ಬ, ಬ್ರದರ್ಸ್‌ ಇಡ್ಯಾ ಸ್ಪೋಟ್ಸ್‌ ಕ್ಲಬ್‌ ಅಧ್ಯಕ್ಷ ಕಲಂದರ್‌ ಶಾ, ಇಡ್ಯಾ ಖಿಲ್ರಿಯಾ ಮಸೀದಿ ಮತ್ತು ಮದರಸ ಸಮಿತಿ ಅಧ್ಯಕ್ಷ ಇಲ್ಯಾಸ್‌, ಉಪಾಧ್ಯಕ್ಷ ಐ. ಅಬೂಬಕರ್‌, ಖಿಲ್ರಿಯಾ ಯಂಗ್‌ ಮೆನ್ಸ್‌ ಅಸೋಶಿಯೇಶನ್‌ ಅಧ್ಯಕ್ಷ ಅಮೀರ್‌ ಹುಸೈನ್‌ ಗುತ್ತು ಮೊದಲಾದವರು ಉಪಸ್ಥಿತರಿದ್ದರು. ಖಿಲ್ರಿಯಾ ಮಸೀದಿ ಮತ್ತು ಮದರಸ ಸಮಿತಿ ಪ್ರಧಾನ ಕಾರ್ಯದರ್ಶಿ ಐ.ಬಿ. ಇಮ್ತಿಯಾಝ್‌ ಅಹಮದ್‌ ಸ್ವಾಗತಿಸಿದರು. ತಯ್ಯಿಬ್‌ ಫೈಝಿ ಕಾರ್ಯಕ್ರಮವನ್ನು ನಿರೂಪಿಸಿದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News