ಫಾಳಿಲಾ - ಫಾಳೀಲಾ ವುಮೆನ್ಸ್ ಕಾಲೇಜ್‌ಗಳ ಇವನ್ ಸೆಮಿಸ್ಟರ್ ಪರೀಕ್ಷೆಯ ಮೌಲ್ಯ ಮಾಪನ ಆರಂಭ

ಪುತ್ತೂರು : 'ಸಮಸ್ತ'ದ ಅಧೀನದ ಫಾಳಿಲಾ-ಫಳೀಲಾ ವುಮೆನ್ಸ್ ಕಾಲೇಜ್ ಗಳ ಇವನ್ ಸೆಮಿಸ್ಟರ್ ಪರೀಕ್ಷೆಯು ಮುಕ್ತಾಯಗೊಂಡಿದ್ದು, ಇದರ ಮೌಲ್ಯಮಾಪನವು ವಿವಿಧ ಝೋನಲ್ ಕೇಂದ್ರಗಳಲ್ಲಿ ಇಂದಿನಿಂದ ಆರಂಭ ಗೊಂಡಿದೆ.
ಕೇರಳ, ಕರ್ನಾಟಕದ ಸುಮಾರು 93 ಪರೀಕ್ಷಾ ಕೇಂದ್ರಗಳಲ್ಲಿ ನಾಲ್ಕು ಸಾವಿರದ ಐನೂರಷ್ಟು ವಿದ್ಯಾರ್ಥಿ ನಿಯರು ಪರೀಕ್ಷೆ ಬರೆದಿದ್ದು ಕರ್ನಾಟಕದಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು ಆರು ನೂರು ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಇದರ ಫಲಿತಾಂಶವು ಮೇ ತಿಂಗಳ ಹತ್ತರಂದು ಪ್ರಕಟಗೊಳ್ಳಲಿದೆ.
ಕರ್ನಾಟಕದಲ್ಲಿ ಸಾಲ್ಮರ ಮತ್ತು ಮಿತ್ತಬೈಲು ಈ ಎರಡು ಡಿವಿಷನ್ ಕೇಂದ್ರಗಳಲ್ಲಿ ಪರೀಕ್ಷಾ ಮೌಲ್ಯ ಮಾಪನವು ಇಂದು ಆರಂಭಗೊಂಡಿದ್ದು. ಕರ್ನಾಟಕದ ಫಾಳಿಲಾ-ಫಳೀಲಾ ಝೋನಲ್ ಕೇಂದ್ರವಾದ ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನಲ್ಲಿ ಮೌಲ್ಯಮಾಪನ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ 'ಸಮಸ್ತ' ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಷ್ ಜೆ.ಪಿ.ಮುಹಮ್ಮದ್ ದಾರಿಮಿ ಕಾಸರ ಗೋಡು ಅವರು ಫಾಳಿಲಾ- ಫಳೀಲಾ ಪಠ್ಯಕ್ರಮದಲ್ಲಿ ಮಹಿಳೆಯರಿಗೆ ಧಾರ್ಮಿಕ - ಲೌಕಿಕ ಸಮನ್ವಯ ಶಿಕ್ಷಣವನ್ನು ನೀಡಲಾಗುತ್ತಿದ್ದು, ಈ ಶಿಕ್ಷಣ ವ್ಯವಸ್ಥೆಯು ಅತ್ಯಂತ ಜನಪ್ರಿಯ ವಾಗಿದೆ ಎಂದರು.
ಫಾಳಿಲಾ-ಫಳೀಲಾ ಕರ್ನಾಟಕ ಝೋನಲ್ ಕಮಿಟಿಯ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ಪರ್ಲಡ್ಕ ಅವರು ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಎಸ್ .ಎಸ್. ಎಲ್. ಸಿ.ಉತ್ತೀರ್ಣರಾದ ವಿದ್ಯಾರ್ಥಿನಿಯರು ಪಿಯುಸಿ ಜೊತೆಗೆ ಫಾಳಿಲಾ ಮತ್ತು ಪಿಯುಸಿ ಉತ್ತೀರ್ಣ ರಾದವರು ಡಿಗ್ರಿ ಮತ್ತು ಫಳೀಲಾ ಕೋರ್ಸ್ ನ ದಾಖಲಾತಿ ಗಾಗಿ ಕರ್ನಾಟಕ ದಲ್ಲಿ ಕಾರ್ಯಾಚರಿಸು ತ್ತಿರುವ ಫಾಳಿಲಾ- ಫಳೀಲಾ ಕಾಲೇಜು ಗಳನ್ನ ಸಂಪರ್ಕಿಸ ಬೇಕೆಂದರು.
ಸಮಾರಂಭದಲ್ಲಿ ಮುಫತ್ತಿಷ್ ಜಾಫರ್ ಫೈಝಿ ಮಲಪ್ಪುರಂ, ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್, ಸಂಚಾಲಕ ಮುಹಮ್ಮದ್ ಸಾಬ್ ಹಾಜಿ, ವಿವಿಧ ಕಾಲೇಜ್ ಗಳ ಪ್ರತಿನಿಧಿಗಳಾದ ಅಬ್ದುರ್ರಹ್ಮಾನ್ ಫೈಝಿ ಕೆಮ್ಮಾರ, ಸಈದ್ ಫೈಝಿ ಕಲ್ಲುಗುಂಡಿ,ಸತ್ತಾರ್ ಅಸ್ನವೀ ಆತೂರು,ಹನೀಫ್ ಫೈಝಿ ಬೆಳ್ತಂಗಡಿ, ಬಶೀರ್ ದಾರಿಮಿ ಸಾಲ್ಮರ, ನೌಫಲ್ ಮಾಸ್ಟರ್ ಆತೂರು ಮೊದಲಾದವರು ಉಪಸ್ಥಿತರಿದ್ದರು.
ಝೋನಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಕಾರ್ಯಕ್ರಮದ ಆರಂಭದಲ್ಲಿ ಸ್ವಗತಿಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.