ಮೂಡುಬಿದಿರೆ ತಾಲೂಕಿನ ಅಭಿವೃದ್ಧಿಗಾಗಿ ಸಿಪಿಎಂ ವತಿಯಿಂದ ಸಾಮೂಹಿಕ ಹಕ್ತೊತ್ತಾಯ ಸಭೆ

ಮೂಡುಬಿದಿರೆ : ತಾಲೂಕಿನ ಅಭಿವೃದ್ಧಿಗಾಗಿ ಸಿಪಿಎಂ ಪಕ್ಷದ ವತಿಯಿಂದ ಸಾಮೂಹಿಕ ಹಕ್ತೊತ್ತಾಯ ಸಭೆಯು ಮೂಡುಬಿದಿರೆ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ನಡೆಯಿತು.
ಸಾಮೂಹಿಕ ಹಕ್ತೊತ್ತಾಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ ಅವರು, ಮೂಡುಬಿದಿರೆ ತಾಲೂಕಿನ ಸಮಸ್ಯೆಗಳನ್ನು ಉನ್ನತ ಅಧಿಕಾರಿ ಗಳು, ಜನ ಪ್ರತಿನಿಧಿಗಳ ಗಮನಕ್ಕೆ ತರುವ ಉದ್ದೇಶದಿಂದ ಈ ಸಾಮೂಹಿಕ ಹಕ್ಕೊತ್ತಾಯ ಚಳವಳಿ ಆಯೋಜಿಸಲಾಗಿದೆ.
ಜಾಗತಿಕ ಉದಾರೀಕರಣ ನೀತಿ ತಂದ ಬಳಿಕ ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿತ್ತು. ಇನ್ನು ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ದೇಶದ ಎಲ್ಲಾ ಸಂಪತ್ತನ್ನು ಅಂಬಾನಿ, ಅದಾನಿಗೆ ನೀಡುವ ಮೂಲಕ ಉದಾರೀಕರಣ ನೀತಿ ಮತ್ತಷ್ಟು ವೇಗ ಪಡೆಯುವಂತಾಯಿತು ಎಂದರು.
ಶ್ರೀಸಾಮಾನ್ಯರು ಸರಕಾರಿ ಆಸ್ಪತ್ರೆಗಳ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಹಣ ಕಿತ್ತುತಿನ್ನುತ್ತಿವೆ. ಈ ಬಗ್ಗೆ ಯಾರೂ ಕೇಳುವವರೇ ಇಲ್ಲದಾ ಗಿದ್ದು, ಧರ್ಮ, ಜಾತಿ ರಾಜಕಾರಣದಲ್ಲಿ ನಿರತರಾಗಿರುವ ಶಾಸಕರಿಗೆ ತಾಲೂಕು ಆಸ್ಪತ್ರೆಗೆ ಓರ್ವ ಉತ್ತಮ ವೈದ್ಯರನ್ನು ನೇಮಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಎಲ್ಲಾ ಪಂಚಾಯತ್ ಗಳಲ್ಲಿ 94ಸಿ 94ಸಿಸಿ ಅಕ್ರಮ ಸಕ್ರಮಗಳಲ್ಲಿ ನಿವೇಶನ ರಹಿತರ ಪಟ್ಟಿ ಪಂಚಾಯತ್ ಗಳಲ್ಲಿ ಕೊಳೆಯುತ್ತಿದೆ. ತಹಶೀಲ್ದಾರ್ ಒಂದೇ ಒಂದು ಮನವಿಯನ್ನೂ ಕನ್ನೆತ್ತಿ ನೋಡಿಲ್ಲ. 94ಸಿಯಲ್ಲಿ 12 ಸೆಂಟ್ ನಿವೇಶನ ನೀಡಬೇಕೆಂದು ಕಾನೂನು ಇರುವಾಗ ಕೆಲವರಿಗೆ 5 ಸೆಂಟ್ ನಿವೇಶನ ಹಂಚಿ ದ್ರೋಹ ಎಸಗಲಾಗಿದೆ ಎಂದರು.
ಖಾಸಗಿ ಬಸ್ ಗಳಲ್ಲಿನ ಸಂಚಾರ ವೆಚ್ಚ ತೀರಾ ಹೆಚ್ಚಾಗಿದ್ದು, ಬಡವರು ದುಡಿದ ಹಣದ ಹೆಚ್ಚಿನ ಪಾಲು ಬಸ್ ಗಳಿಗೆ ನೀಡಬೇಕಿದೆ. ಹಾಗಾಗಿ ಮುಡುಬಿದಿರೆಗೂ ಖಾಯಂ ಸರಕಾರಿ ಬಸ್ ಗಳನ್ನು ನಿಯೋಜಿಸ ಬೇಕೆಂದು ಆಗ್ರಹಿಸಿದರು.
ಪ್ರಾಸ್ತಾವಿಕ ಮಾತನಾಡಿದ ಸಿಪಿಎಂ ಮೂಡುಬಿದಿರೆ ತಾಲೂಕು ಕಾರ್ಯದರ್ಶಿ ರಮಣಿ ಅವರು, ಮೂಡುಬಿದಿರೆ ತಾಲೂಕು ಆಗಿ ಎರಡು ವರ್ಷಕಳೆದರೂ ಈವರೆಗೂ ಅಭಿವೃದ್ಧಿ ಕಂಡಿಲ್ಲ. ತಾಲೂಕು ಆಸ್ಪತೆಯಲ್ಲಿ ವೈದ್ಯಾಧಿಕಾರಿ ಇಲ್ಲ. ತಹಶೀಲ್ದಾರ್ ಇಲ್ಲ. ಬಡವರಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಸಿಕ್ಕಿದವರಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಅಮದು ಆರೋಪಿಸಿದರು.
ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಯಲ್ಲಿದ್ದರೂ ಮಾಲಕರು ಅದನ್ನು ನೀಡುತ್ತಿಲ್ಲ. ಕಟ್ಟಡ ಕಾರ್ಮಿಕ ರಿಗೆ ಶೇ. 25 ರಷ್ಟು ಮಾತ್ರ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ದೂರಿದರು.
ಜನಪ್ರತಿನಿಧಿಗಳು ಕೊರಗ ಜನಾಂಗದ ಪರ ವರವಾಗಿ ಧ್ವನಿ ಎತ್ತದೆ ಅವರ ಕುರ್ಚಿಗಳಿಗಾಗಿ ಮಾತ್ರ ವಿಧಾನ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ತಾಲುಕಿನಾದ್ಯಂತ ನೀರಿನ ಸಮಸ್ಯೆಇದೆ. ಒಳ ರಸ್ತೆಗಳು ವಿದ್ಯುತ್ ವ್ಯವಸ್ಥೆಇಲ್ಲ. ಅವುಗಳನ್ನು ಗುರುತಿಸಿ ಸರಿಪಡಿಸುವ ಕೆಲಸ ಕೂಡಲೇ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಭೆಯನ್ನುದ್ದೇಶಿಸಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂಭ್ಲಿ ವಸಂತ ಆಚಾರಿ, ಕಾಂ. ಬಿ.ಎಂ. ಭಟ್, ವಸಂತ ಆಚಾರಿ ಮೊದಲಾದವರು ಮಾತನಾಡಿದರು.
ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ಗಿರಿಜಾ ಮೂಡುಬಿದಿರೆ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ, ಶಂಕರ್ ವಾಲ್ಪಾಡಿ, ಸುಂದರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಭೆಗೂ ಮುನ್ನ ಹಳೆಯ ಪೊಲೀಸ್ ಠಾಣೆಯ ಬಳಿಯಿಂದ ಮುನ್ನೂರನ್ನೂ ಹೆಚ್ವಿನ ಧರಣಿ ನಿರತರು ಕಾಲ್ನಡಿಗೆ ಮೂಲಕ ಮಿನಿ ವಿಧಾನ ಸೌಧದ ವರೆಗೆ ಜಾಥಾ ನಡೆಸಿದರು.
ಹಕ್ಕೊತ್ತಾಯ ಧರಣಿಯ ಸ್ಥಳಕ್ಕೆ ಮೂಡುಬಿದಿರೆ ತಹಶೀಲ್ದಾರ್ ಅವರಿಗೆ 18 ಹಕ್ಕೊತ್ತಾಯಗಳಿರುವ ಮನವಿ ಪತ್ರವನ್ನು ಸಲ್ಲಿಸಿದರು. ಮನವಿಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಅವರು, ತಾಲೂಕು ಮಟ್ಟದಲ್ಲಿ ಮಾಡಬಹುದಾದ ಎಲ್ಲಾ ಬೇಡಿಕೆಗಳನ್ನು ಏಡಿರಿಸಲು ಕ್ರಮಕೈಗೊಳ್ಳಲಾಗುವುದು. ಜೊತೆಗೆ ಜಿಲ್ಲಾಧಿಕಾರಿಗಳ ಮೂಲಕ ಸರಕಾದ ಗಮನಕ್ಕೂ ತಂದು ಹಕ್ಕೊತ್ತಾಯಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
"ಬ್ಯಾಂಕ್ ಗಳಲ್ಲಿ ಹಣ ಇಡುವವರು ಬಡವರು ಆದರೆ, ಅವರಿಗೆ ಸಾಲ ನೀಡುವ ಬದಲಾಗಿ ಶ್ರೀಮಂತರಿಗೆ ಕೋಟಿಗಟ್ಟಲೆ ಹಣ ಸಾಲ ನಿಡುತ್ತಾರೆ. ಹಾಗಾಗಿ ಬಡವರು ಫೈನಾಲ್ಸ್ , ಮೈಕ್ರೋ ಫೈನಾಲ್ಸ್ ಗಳಿಂದ ಸಾಲ ಪಡೆಸುಕೊಳ್ಳುವಂತಾಗಿದೆ. ಈ ಸಂಬಂಧ ಮುಡುಬಿದಿರೆ ತಹಶೀಲ್ದಾರ್ ಅವರು ಬ್ಯಾಂಕರ್ ಗಳ ಸಭೆ ಕರೆದು ಬಡವರಿಗೂ ಸಾಲ ನೀಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು".
- ಯಾದವ ಶೆಟ್ಟಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ
"ಮೂಡುಬಿದಿರೆಯಲ್ಲಿ ರಾಮರಾಜ್ಯವಿಲ್ಲ. ದೇಶದಲ್ಲೂ ಇಲ್ಲ. ಜನರ ಜೀವ ತೆಗೆಯುತ್ತಿದ್ದೀರಿ. ಅವರನ್ನು ಭಯ ಭೀತರನ್ನಾಗಿಸಿ ರಾಜಕೀಯ ಮಾಡುತ್ತಿರುವವರು ಭಯೋತ್ಪಾದಕರು".
- ಕಾಂ. ಬಿ.ಎಂ. ಭಟ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ
