ಗಾಂಜಾ ಸೇವನೆ ಆರೋಪ: ನಾಲ್ಕು ಮಂದಿ ಸೆರೆ
Update: 2025-04-28 22:38 IST

ಮಂಗಳೂರು,ಎ.28:ಕಂಕನಾಡಿ ನಗರ ಮತ್ತು ಉರ್ವ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಪ್ಪಿನಮೊಗರು ಜಂಕ್ಷನ್ ಹತ್ತಿರ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದ ಮೇರೆಗೆ ಅಬ್ದುಲ್ ಖಾದರ್ ಸಹರನ್, ಬಿಜೈ ಕಾಪಿಕಾಡ್‌ನಲ್ಲಿ ಮೂಡಿಗೆರೆ ನಿವಾಸಿ ಹರ್ಷಿತ್(22), ಕೇರಳದ ಎರ್ನಾಕುಲಂ ಎಝಿಕ್ಕರ ನಿವಾಸಿ ಆನಂದ ಗಿರೀಶ್ (27), ಕೊಲ್ಲಂನ ಏಬಲ್ ಸಿ. ಅಶೋಕ್ (22) ಎಂಬವರನ್ನು ಬಂಧಿಸಲಾಗಿದೆ,
ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.