ತಾಜುಲ್ ಉಲಮಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು: ಅಬ್ದುಲ್ ವಾಸಿಹ್ ಬಾಖವಿ ಕುಟ್ಟಿಪುರಮ್

ಉಳ್ಳಾಲ: ಉಳ್ಳಾಲ ಒಂದು ಪುಣ್ಯ ಇರುವ ಜಾಗ. ಇದಕ್ಕೆ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಅವರ ದರ್ಗಾ ಕಾರಣ. ತಾಜುಲ್ ಉಲಮಾ ಇದೇ ಪರಿಸರದಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದರು. ಈ ಕಾರಣದಿಂದ ಉಳ್ಳಾಲ ಅಭಿವೃದ್ಧಿ ಯತ್ತ ಸಾಗುತ್ತಿದೆ ಎಂದು ಅಬ್ದುಲ್ ವಾಸಿಹ್ ಬಾಖವಿ ಕುಟ್ಟಿ ಪುರಮ್ ಹೇಳಿದರು
ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಭಾನುವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
1955 ರಲ್ಲಿ ಉಳ್ಳಾಲಕ್ಕೆ ಬಂದ ತಾಜುಲ್ ಉಲಮಾ ಅವರು, 62 ವರ್ಷ ಸೇವೆ ಸಲ್ಲಿಸಿದ್ದರು. 1972 ರಲ್ಲಿ ಅರೆಬಿಕ್ ಕಾಲೇಜು ಆರಂಭ ಆಗಿತ್ತು. ಅಲ್ಲಿಯವರೆಗೆ ಅವರು ಮಸೀದಿಯಲ್ಲೇ ದರ್ಸ್ ಆರಂಭಿಸಿದ್ದರು. ಅವರು ಅದೇ ಸಮಯದಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಇಂದು ಉಳ್ಳಾಲ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆಯುವಂತಾಯಿತು ಎಂದರು.
ಅಶ್ಫಾಕ್ ಫೈಝಿ ನಂದಾವರ ಧಾರ್ಮಿಕ ಪ್ರವಚನ ನೀಡಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು , ಉಳ್ಳಾಲ ತಾಲೂಕು ಆಹಾರ ನಿರೀಕ್ಷಕ ರಫೀಕ್ , ಕಲ್ಲಾಪು ಜುಮಾ ಮಸೀದಿ ಅಧ್ಯಕ್ಷ ಜೆ.ಅಬ್ದುಲ್ ಹಮೀದ್, ಖತೀಬ್ ಶರೀಫ್ ಸ ಅದಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝಿಯಾದ್ ತಂಙಳ್,ಝೈನುದ್ದೀನ್ ಮೇಲಂಗಡಿ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ,ಝಕರಿಯಾ ಅಹ್ಸನಿ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.