ಕಾಣೆಯಾದವರ ಪತ್ತೆಗೆ ಮನವಿ

Update: 2025-04-29 20:27 IST
ಕಾಣೆಯಾದವರ ಪತ್ತೆಗೆ ಮನವಿ
  • whatsapp icon

ಮಂಗಳೂರು, ಎ.29: ನೇಹಾ (18) ಎಂಬವರು ಎ. 26 ರಂದು ಬೆಳಗ್ಗೆ ಎಂದಿನಂತೆ ಬ್ಯೂಟಿ ಪಾರ್ಲರ್‌ಗೆ ಕೆಲಸಕ್ಕೆ ಹೋದವರು ಮನೆಗೆ ಬಾರದೇ ಕಾಣೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ:- ಎತ್ತರ ಸುಮಾರು 5 ಅಡಿ 2 ಇಂಚು, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕೆಂಚು ಮಿಶ್ರಿತ ಕಪ್ಪು ಕೂದಲು ಹೊಂದಿರುತ್ತಾರೆ. ಕನ್ನಡ, ತೆಲಗು, ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ದಕ್ಷಿಣ ಪೊಲೀಸ್‌ಠಾಣೆ ಠಾಣಾಧಿಕಾರಿಯನ್ನು ಸಂಪರ್ಕಿ ಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News