ಪಡಿತರ ಅಕ್ಕಿ ಹೆಚ್ಚು ಬೆಲೆಗೆ ಮಾರಾಟ: ಗೋದಾಮು ವಶ
Update: 2025-04-29 20:33 IST

ಮಂಗಳೂರು, ಎ.29: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ರೊಸರಿಯೋ ಶಾಲೆಯ ಹಿಂಭಾಗದ ನೀರೇಶ್ವಾಲ್ಯ ರಸ್ತೆಯ ಪಕ್ಕದ ಖಾಸಗಿ ಗೋದಾಮೊಂದರಲ್ಲಿ ಸರಕಾರದಿಂದ ಬಡಜನರಿಗೆ ವಿತರಿಸುವ ಪಡಿತರ ಅಕ್ಕಿಯನ್ನು ದಾಸ್ತಾನಿರಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಬಂದಿರುವ ದೂರಿನ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಗೋದಾಮನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.