ಓದುವ ಹವ್ಯಾಸ ವಿದ್ಯಾರ್ಥಿಗಳ ಕಲಿಕೆಗೆ ಪೂರಕ: ಸುಧಾ ನಾಗೇಶ್

ಮಂಗಳೂರು: ವಿದ್ಯಾರ್ಥಿಗಳು ಸಾಹಿತ್ಯದ ವಿವಿಧ ಪ್ರಕಾರಗಳಾದ ಕತೆ, ಕವಿತೆ, ಕಾದಂಬರಿ ಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಅದು ಅವರ ಕಲಿಕೆಗೆ ಪೂರಕವಾಗುತ್ತದೆ ಎಂದು ಲೇಖಕಿ ಹಾಗೂ ಶಿಕ್ಷಕಿ ಸುಧಾ ನಾಗೇಶ್ ಹೇಳಿದರು.
ವಿದ್ಯಾರ್ಥಿಗಳು ಶಾಲಾ ಪರೀಕ್ಷೆಗಳನ್ನು ನಿಭಾಯಿಸಲು ಹೆದರುವುದಿಲ್ಲ. ಯಾಕೆಂದರೆ ಸಾಹಿತ್ಯದ ಓದುಗರು ಶಾಲಾ ಪರೀಕ್ಷೆ ಸಹಿತ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ ಮನೋಬಲವನ್ನು ರೂಢಿಸಿಕೊಳ್ಳುತ್ತಾರೆ ಎಂದು ಲೇಖಕಿ ಹಾಗೂ ಶಿಕ್ಷಕಿ ಸುಧಾ ನಾಗೇಶ್ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ ‘ಬಲೆ ತುಳು ಓದುಗ’ ಅಭಿಯಾನದ ಕೂಟ- 4 ಕಾರ್ಯಕ್ರಮದ ಭಾಗವಾಗಿ ನಗರದ ಉರ್ವಾಸ್ಟೋರ್‌ನಲ್ಲಿ ರುವ ತುಳು ಭವನದ ಗ್ರಂಥಾಲಯಕ್ಕೆ ಮಂಗಳವಾರ ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಸಹಯೋಗ ದೊಂದಿಗೆ ಏರ್ಪಡಿಸಿದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ ಸಹಿತ ಬದುಕಿನ ಸವಾಲುಗಳನ್ನು ಎದುರಿಸಲು ಸಾಹಿತ್ಯದ ಓದು ಮನೋ ಸ್ಥೈರ್ಯ ವನ್ನು ನೀಡಬಹುದು. ತುಳು ಸಾಹಿತ್ಯದಲ್ಲಿಯೂ ಸಾಕಷ್ಟು ವೈವಿಧ್ಯತೆ ಇದೆ.ಅದನ್ನು ಓದಿ ತಿಳಿದುಕೊಳ್ಳಬೇಕು ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಕಳೆದು ಹೋಗಬಾರದು ಎಂದು ಕಿವಿಮಾತು ಹೇಳಿದರು.
* ಓದುವ ಅಭಿರುಚಿ ನಮ್ಮ ಬದುಕಿನಲ್ಲಿ ಜ್ಞಾನದ ಬೆಳಕನ್ನು ಮೂಡಿಸುತ್ತದೆ. ಹೊಸ ತಲೆಮಾರಿನ ಓದುವ ಅಭ್ಯಾಸ ಕಡಿಮೆ ಯಾಗುತ್ತಿದೆ.ಇದರಿಂದ ಸಾಕಷ್ಟು ನಿಯತಕಾಲಿಕಗಳು ಮರೆಯಾಗಿವೆ ಎಂದು ಮುಖ್ಯ ಅತಿಥಿ ಹಿರಿಯ ಪತ್ರಕರ್ತ ಪುಷ್ಪರಾಜ್ ಬಿ.ಎನ್ ಮಾತನಾಡುತ್ತಾ,ಜ್ಞಾನ ಸಂಪಾದನೆಗೆ ದೇಶ ಸುತ್ತಿ ನೋಡು. ಕೋಶ ಓದಿ ನೋಡು ಎನ್ನುವುದು ಜ್ಞಾನಿಗಳ ಮಾತು. ಹಿಂದಿನ ಕಾಲದಲ್ಲಿ ಜನ ಸಾಮಾನ್ಯ ರಲ್ಲೂ ನಿಯತಕಾಲಿಕಗಳನ್ನು ಕೊಂಡು ಓದುವ ಹವ್ಯಾಸ ಇತ್ತು ಎಂದು ನೆನಪಿಸಿಕೊಂಡರು.
ಭಾಷೆಯ ಅಳಿದು ಹೋದರೆ ಅದರ ಒಟ್ಟಿಗೆ ಒಂದು ಸಂಸ್ಕೃತಿ ಕೂಡ ನಾಶವಾಗುತ್ತದೆ ಎನ್ನುವ ಮಾತಿದೆ.ಶ್ರೀಮಂತ ಸಂಸ್ಕೃತಿ, ಅಗಾಧವಾದ ಸಾಹಿತ್ಯ, ಶಬ್ಧ ಬಂಡಾರ ಹೊಂದಿರುವ ತುಳು ಭಾಷೆ, ಸಾಹಿತ್ಯ ಕೃತಿಗಳು ವಿದ್ಯಾರ್ಥಿ ಗಳ ಜ್ಞಾನಾರ್ಜನೆಗೆ ಸಹಕಾರಿ ಎಂದರು.
*ತುಳುವಿನಲ್ಲಿ ಸಾಕಷ್ಟು ಸಾಹಿತ್ಯ ಕೃತಿಗಳ ಸಂಗ್ರಹವಿದೆ ಎಂದುಅಧ್ಯಕ್ಷತೆ ವಹಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡುತ್ತಾ, ಕನ್ನಡ, ಇಂಗ್ಲಿಷ್ ಸಾಹಿತ್ಯದ ಕುರಿತು ಮಾತನಾಡುವ ತುಂಬಾ ಮಂದಿ ತುಳುವಿನಲ್ಲಿ ಏನು ಇದೆ ಎಂದು ಪ್ರಶ್ನಿಸುತ್ತಾರೆ. ತುಳು ಭವನದಲ್ಲಿರುವ ಗ್ರಂಥಾಲಯದಲ್ಲಿ ಸುಮಾರು 4000 ಪುಸ್ತಕಗಳಿದ್ದು, ಅವುಗಳಲ್ಲಿ ತುಳುವಿ ನಲ್ಲಿಯೇ ಬರೆದಿರುವ ಸುಮಾರು 2,500 ಪುಸ್ತಕಗಳು ಹಾಗೂ ಉಳಿದವು ತುಳುವಿನ ಬಗ್ಗೆ ಬರೆದಿರುವ ಇತರ ಭಾಷೆಯ ಕೃತಿಗಳು. ತುಳುವಿನ ಮಹಾಕಾವ್ಯ, ಕಾವ್ಯ, ಕಾದಂಬರಿ, ಕವಿತೆ ಸಹಿತ ಇತರ ಭಾಷೆಯಲ್ಲಿ ಲಭ್ಯವಾಗುವ ಎಲ್ಲ ಪ್ರಕಾರಗಳ ಸಾಹಿತ್ಯ ಕೃತಿಗಳು ಇಲ್ಲಿವೆ ಎಮದು ಹೇಳಿದರು.
ತುಳು ಭಾಷೆ, ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ‘ಬಲೆ ತುಳು ಓದುಗ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿ ಸಮೂಹ ಹಾಗೂ ಶಾಲಾ ಆಡಳಿತ ವ್ಯವಸ್ಥೆಯಿಂದ ಉತ್ತಮ ಸ್ಪಂದನೆ ದೊರೆತ್ತಿದೆ ಎಂದರು.
ಬಲೆ ತುಳು ಓದುಗ’ ಅಭಿಯಾನದ ಕೂಟ
ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅಕಾಡೆಮಿ ಗ್ರಂಥಾಲಯದಲ್ಲಿ ಸಾಹಿತ್ಯದ ಅವಲೋಕನ ನಡೆಸಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಅನುಭವ ಹಂಚಿ ಕೊಂಡರು.
ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕಿ ಪ್ರಾಧ್ಯಾಪಕಿ ತನುಜ ಎಂ ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿನಿ ಪ್ರತಿನಿಧಿ ತೇಜಸ್ವಿ ಉಪಸ್ಥಿತರಿದ್ದರು.ಅಕಾಡೆಮಿ ಸದಸ್ಯ ಸಂಚಾಲಕ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರ್ವಹಿಸಿದರು.
