ಗೃಹ ಸಚಿವರ ಹೇಳಿಕೆ ಸ್ವೀಕಾರಾರ್ಹವಲ್ಲ: ಮಾಜಿ ಮೇಯರ್ ಅಶ್ರಫ್
Update: 2025-04-29 23:11 IST

ಅಶ್ರಫ್
ಮಂಗಳೂರು: ಕುಡುಪುವಿನಲ್ಲಿ ಮುಸ್ಲಿಮ್ ಎಂಬ ಕಾರಣಕ್ಕಾಗಿ ದುಷ್ಕರ್ಮಿಗಳ ಗುಂಪು ಹತ್ಯೆಗೈದಿದ್ದು, ಪೊಲೀಸು ಇಲಾಖೆಯು 15 ಮಂದಿಯನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಹತನಾದ ವ್ಯಕ್ತಿ ಪಾಕಿಸ್ತಾನ ಝಿಂದಾಬಾದ್ ಕೂಗಿದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಗೃಹ ಸಚಿವರ ಈ ಹೇಳಿಕೆಯು ಘಟನೆಯನ್ನು ಸರಿದೂಗಿಸುವ ಪ್ರಯತ್ನವಾಗಿದೆ. ಸಚಿವರ ಇಂತಹ ಸ್ವೀಕಾರಾರ್ಹವಲ್ಲ. ಇಂತಹ ಹೇಳಿಕೆಗಳು ಜನರು ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರೋತ್ಸಾಹ ನೀಡಿದಂತಿದೆ. ಗೃಹ ಸಚಿವರು ಸರಕಾರದ ಭಾಗವಾಗಿ ಅಪರಾಧ ತಡೆಯುವ ನಿಟ್ಟಿನ ಹೇಳಿಕೆ ನೀಡಬೇಕಿತ್ತು. ಘಟನೆಯನ್ನು ಸರಿದೂಗಿ ಸುವ ಹೇಳಿಕೆ ನೀಡಿ ಯಾವುದೋ ಒಂದು ವಿಭಾಗವನ್ನು ತೃಪ್ತಿಪಡಿಸುವ ರೀತಿಯಲ್ಲಿರುವುದು ಖೇದಕರ ಎಂದು ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.