ಇಸ್ಲಾಮ್ ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಬಂದಿದೆ: ಶಿಹಾಬುದ್ದೀನ್ ತಂಙಳ್

ಉಳ್ಳಾಲ: ಇಸ್ಲಾಮ್ ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಬಂದಿದೆ. ಜನರ ಜೀವನದ ಬೆಳಕು ಆಗಿರುವ ಶಿಕ್ಷಣ ಎಲ್ಲೆಡೆ ಬೆಳೆಯಬೇಕು. ಇದಕ್ಕೆ ನಾವು ಪ್ರೋತ್ಸಾಹ ನೀಡಬೇಕು ಎಂದು ಸಯ್ಯಿದ್ ಶಿಹಾಬುದ್ದೀನ್ ತಂಙಳ್ ತಲಕ್ಕಿ ಹೇಳಿದರು.
ಅವರು ಉಳ್ಳಾಲ ದರ್ಗಾ ದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜವಾಬ್ದಾರಿ ಎಂಬುದು ಜನರಿಗೆ ಇದೆ. ಅದು ಯಾವ ಕಾಲಕ್ಕೂ ಮುಗಿಯುವುದಿಲ್ಲ. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರಿಗೆ ಇಸ್ಲಾಮ್ ಧರ್ಮ ಬೋಧನೆ ಮಾಡುವುದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ದ್ದರು. ಅವರು ಏನು ಬೋಧನೆ ಮಾಡಿದ್ದಾರೆಯೋ ಅದನ್ನು ನಾವು ಪಾಲನೆ ಮಾಡಬೇಕು. ಐದು ಬಾರಿ ನಮಾಝ್ ನಿರ್ವಹಣೆ ಮಾಡಬೇಕು ಎಂದು ಕರೆ ನೀಡಿದರು.
ಮೊಹಮ್ಮದ್ ಫೈಝಿ ಪಟ್ಲ ಉಸ್ತಾದ್ ಮಾತನಾಡಿ, ಇಸ್ಲಾಂ ಮತ್ತು ಶಿಕ್ಷಣದ ಮಹತ್ವ ವಿವರಿಸಿದರು.
ಎಮ್ .ಸಿ.ಮುಹಮ್ಮದ್ ಫೈಝಿ ಮೋಙಂ ಹಾಗೂ ಇಬ್ರಾಹೀಮ್ ಸಖಾಫಿ ಪುಝಕ್ಕಾಟಿರಿ ಧಾರ್ಮಿಕ ಪ್ರವಚನ ನೀಡಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಅಬೂಬಕ್ಕರ್ ಹೈದರಲಿ ನಗರ,ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್,ಏಷ್ಯನ್ ಬಾವ ಹಾಜಿ ದೇರಳಕಟ್ಟೆ ,ಶರೀಫ್ ಬಾಖವಿ, ಬಿ.ಕೆ.ಸಖಾಫಿ, ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.
