ಪಡುಬಿದ್ರಿ: ಮನೆಗೆ ನುಗ್ಗಿ ನಗ-ನಗದು ಕಳವು

Update: 2023-11-19 21:01 IST
ಪಡುಬಿದ್ರಿ: ಮನೆಗೆ ನುಗ್ಗಿ ನಗ-ನಗದು ಕಳವು
  • whatsapp icon

ಪಡುಬಿದ್ರಿ: ಇಲ್ಲಿನ ಇನ್ನಾ ಗ್ರಾಮದ ನಿವಾಸಿ ಕಾಂಗ್ರೆಸ್ ಮುಖಂಡ ಎಂ. ಪಿ. ಮೊಯಿದಿನಬ್ಬ ಅವರ ಮನೆಯಲ್ಲಿ ಶನಿವಾರ ರಾತ್ರಿ ಕಳ್ಳತನ ನಡೆದು 15 ಸಾವಿರ ನಗದು ಮತ್ತು 64 ಗ್ರಾಮ್ ಬಂಗಾರ ಕಳವಾದ ಬಗ್ಗೆ ಪಡುಬಿದ್ರಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರ ರಾತ್ರಿ 11 ರಿಂದ ಮುಂಜಾನೆ 3.30 ರ ಮಧ್ಯೆ ಹಿಂಬಾಗಿಲ ಮೂಲಕ ಮನೆಗೆ ಪ್ರವೇಶ ಮಾಡಿದ ಕಳ್ಳರು ನಗದು ಚಿನ್ನಾಭರಣಗಳನ್ನು ಕದ್ದೊಯ್ದಿರುವುದಾಗಿ ಮೊಯದಿನಬ್ಬ ಅವರು ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ, ಕಾಪು ವ್ರತ್ತ ನಿರೀಕ್ಷಕರಾದ ಜಯಶ್ರೀ ಮಾಣೆ, ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News