ಪುತ್ತೂರು | ಆಯಿಷಾ ಅಮ್ರತ್ ಗೆ ಎಂಬಿಬಿಎಸ್ ಪದವಿ
Update: 2025-04-16 14:09 IST

ಪುತ್ತೂರು : ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಂಶುಪಾಲ, ಪುತ್ತೂರು ತಾಲೂಕಿನ ಮಾಡನ್ನೂರು ಗ್ರಾಮದ ಅಶ್ವತಡಿ ಎಂಬಲ್ಲಿನ ನಿವಾಸಿ ಡಾ.ಅಬ್ದುಲ್ ರಹಿಮಾನ್ ಮತ್ತು ಗುಲ್ಶಾನ್ ದಂಪತಿಯ ಪುತ್ರಿ ಆಯಿಷಾ ಅಮ್ರತ್ ಅವರು ಎಂಬಿಬಿಎಸ್ ವೈದ್ಯಕೀಯ ಪದವಿ ಪಡೆದುಕೊಂಡಿದ್ದಾರೆ.
ಅವರು ತಮ್ಮ ವಿದ್ಯಾಭ್ಯಾಸವನ್ನು ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಮತ್ತು ಶ್ರೀಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮುಗಿಸಿದ್ದು, ಇದೀಗ ಎಂ.ಬಿ.ಬಿ.ಎಸ್ ಪದವಿ ಪಡೆದುಕೊಂಡಿದ್ದಾರೆ