ದ್ವಿತೀಯ ಪಿ.ಯು ಪರೀಕ್ಷೆ : ಟಿಪ್ಪು ಸುಲ್ತಾನ್ ಕಾಲೇಜಿಗೆ ಉತ್ತಮ ಫಲಿತಾಂಶ
Update: 2025-04-10 15:32 IST

ಉಳ್ಳಾಲ : ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ, ಟಿಪ್ಪು ಸುಲ್ತಾನ್ ಪಿಯು ಕಾಲೇಜ್ ಶೇ.81 ಫಲಿತಾಂಶ ಸಾಧಿಸಿದೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿ ಅಬೂಬಕ್ಕರ್ ಸಿದ್ದಿಕ್ ಶೇ.91 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಹಾಗೂ ಇಸ್ಮಾಯಿಲ್ ಸಲ್ಮಾನುಲ್ ಫಾರೀಶ್ ಶೀ.90 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಗೂ ಅವರನ್ನು ಪ್ರೋತ್ಸಾಹಿಸಿದ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವರ್ಗದವರನ್ನು ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಆಡಳಿತ ಮಂಡಳಿ ಅಭಿನಂದನೆಗಳನ್ನು ಸಲ್ಲಿಸಿದೆ .