ನ.11ರಂದು ಮಕ್ಕಳೊಂದಿಗೆ ಸ್ಪೀಕರ್‌ ಯು.ಟಿ ಖಾದರ್ ಸಂವಾದ

Update: 2023-11-10 17:25 GMT

ಮಂಗಳೂರು, ನ.10: ರಾಜ್ಯ ಮಟ್ಟದಲ್ಲಿ ಪ್ರತಿ ವರ್ಷ ಮಕ್ಕಳ ಸಂಸತ್ ಮುಖ್ಯಮಂತ್ರಿಯೊಂದಿಗೆ ಮಕ್ಕಳ ಸಂವಾದ ನಡೆಸುತ್ತಾ ಬಂದಿದ್ದು, ಈ ಬಾರಿ ಸಂವಾದ ಕಾರ್ಯಕ್ರಮ ಬೆಂಗಳೂರಿನಲ್ಲಿ 2023 ನವೆಂಬರ್ ನಲ್ಲಿ ನಡೆಯಲಿದೆ.

ಸಂವಾದ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಪ್ರತಿ ಜಿಲ್ಲೆಯಲ್ಲಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ದ.ಕ ಜಿಲ್ಲೆಯ ಮಕ್ಕಳ ಸಂಸತ್ತು ಕುರಿತು ಸಂವಾದ ಕಾರ್ಯಕ್ರಮ ನ. 11ರಂದು ಬೆಳಗ್ಗೆ 9:30 ಗಂಟೆಗೆ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶಿನಿ ನಿಲಯ ಮಂಗಳೂರು ಇಲ್ಲಿ ನಡೆಯಲಿದೆ.

ಪ್ರಮುಖವಾಗಿ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ವಿಧಾನಸಭಾ ಸ್ಪೀಕರ್‌ ಯು.ಟಿ ಖಾದರ್ ಮಕ್ಕಳ ಜೊತೆ ಸಂವಾದ ನಡೆಸಿ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News