ಬೇಸಿಗೆ ಶಾಲಾ ಕಾಲೇಜು ರಜೆ ಹಿನ್ನಲೆ; ಪಾಲ್ಘಾಟ್ ವಿಭಾಗದಿಂದ ಕೆಲ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ

Update: 2025-04-23 14:31 IST
ಬೇಸಿಗೆ ಶಾಲಾ ಕಾಲೇಜು ರಜೆ ಹಿನ್ನಲೆ; ಪಾಲ್ಘಾಟ್ ವಿಭಾಗದಿಂದ ಕೆಲ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ
ಸಾಂದರ್ಭಿಕ ಚಿತ್ರ
  • whatsapp icon

ಮಂಗಳೂರು, ಎ. 23: ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಆರಂಭವಾಗಿರುವುದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ಪಾಲ್ಘಾಟ್ ರೈಲ್ವೇ ವಿಭಾಗವು ಕೆಲ ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿ ಕ್ರಮ ವಹಿಸಿದೆ.

ತಿರುವನಂತಪುರಂ ಸೆಂಟ್ರಲ್‌ನಿಂದ ಆರಂಭವಾಗುವ ರೈಲು ಸಂಖ್ಯೆ 16604 ತಿರುವನಂತಪುರಂ ಸೆಂಟ್ರಲ್ ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್‌ಗೆ ಎ. 25ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ ಒದಗಿಸಲಾಗುತ್ತಿದೆ.

ಮಂಗಳೂರು ಸೆಂಟ್ರಲ್‌ನಿಂದ ಎ. 24ರಂದು ಹೊರಡುವ ರೈಲು ಸಂಖ್ಯೆ 16603 ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುತ್ತಿದೆ.

ತಿರುವನಂತಪುರಂ ಸೆಂಟ್ರಲ್‌ನಿಂದ ಆರಂಭವಾಗುವ ರೈಲು ಸಂಖ್ಯೆ 16629 ತಿರುವನಂತಪುರಂ ಸೆಂಟ್ರಲ್ ಮಂಗಳೂರು ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ರೈಲಿಗೆ ಎ. 24 ಮತ್ತು 25ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿ ನೀಡಲಾಗುತ್ತಿದೆ.

ಮಂಗಳೂರು ಸೆಂಟ್ರಲ್‌ನಿಂದ ಆರಂಭವಾಗುವ ರೈಲು ಸಂಖ್ಯೆ 16630 ಮಂಗಳೂರು ಸೆಂಟ್ರಲ್ ತಿರುವನಂತಪುರಂ ಸೆಂಟ್ರಲ್ ಅಲಬಾರ್ ಎಕ್ಸ್‌ಪ್ರೆಸ್ ರೈಲಿನ ಎ. 24ರ ಪ್ರಯಾಣಕ್ಕೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ನೀಡಲಾಗುತ್ತಿದೆ.

ತಿರುವನಂತಪುರಂ ಸೆಂಟ್ರಲ್‌ನಿಂದ ಆರಂಭವಾಗು ರೈಲು ಸಂಖ್ಯೆ 16343 ತಿರುವನಂತಪುರಂ ಸೆಂಟ್ರಲ್ ಮಧುರೈ ಜಂಕ್ಷನ್ ಅಮೃತ ಎಕ್ಸ್‌ಪ್ರೆಸ್ ರೈಲಿಗೆ ಎ. 24ರಂದು ಒಂದು ಹೆಚ್ಚುವರಿ ಸ್ಲೀಪರ್ ಕೋಚ್ ನೀಡಲಾಗುತ್ತಿದೆ.

ಮಧುರೈ ಜಂಕ್ಷನ್‌ನಿಂದ ಆರಂಭವಾಗುವ ರೈಲು ಸಂಖ್ಯೆ 16344 ಮಧುರೈ ಜಂಕ್ಷನ್ ತಿರುವನಂತಪುರಂ ಸೆಂಟ್ರಲ ಅಮೃತ ಎಕ್ಸ್‌ಪ್ರೆಸ್ ರೈಲಿನ ಎ. 24 ಮತ್ತು 25ರ ಪ್ರಯಾಣಕ್ಕೆ ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಕೋಚ್ ನೀಡಲಾಗುತ್ತಿದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News