ಶಿಕ್ಷಣದಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯ : ಅಶ್ರಫ್ ಶಾ ಮಾಂತೂರು

Update: 2024-12-25 19:39 IST
ಶಿಕ್ಷಣದಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯ : ಅಶ್ರಫ್ ಶಾ ಮಾಂತೂರು
  • whatsapp icon

ಕುಂಬ್ರ: ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಇದರ ‘ಕೆಐಸಿ ವಿಝನ್ 2026’ ಯೋಜನೆ ಅನಾವರಣ ಕಾರ್ಯಕ್ರಮವು ಸಂಸ್ಥೆಯ ವಠಾರದಲ್ಲಿ ನಡೆಯಿತು. ಅಧ್ಯಕ್ಷರಾದ ಕೆ.ಪಿ ಅಹ್ಮದ್ ಹಾಜಿ ಆಕರ್ಷನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಜೆಕ್ಟ್ ಅನಾವರಣವನ್ನು ನಿರ್ವಹಿಸಿದರು.

ಖ್ಯಾತ ಉದ್ಯಮಿ ಹಾಗೂ ಸಮಾಜಿಕ ತಜ್ಞ ಅಂಜದ್ ಖಾನ್ ಪೋಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಯಮಿ ಅಶ್ರಫ್ ಶಾ ಮಾಂತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಜಿ ಮುಹಮ್ಮದ್ ಕುಕ್ಕುವಳ್ಳಿಯನ್ನು ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಕೆ.ಎಂ ಬಾವ ಹಾಜಿ ಕೂರ್ನಡ್ಕ, ಸುಲೈಮಾನ್ ಹಾಜಿ ಕಲ್ಲಡ್ಕ, ಉಮ್ಮರ್ ಮುಸ್ಲಿಯಾರ್ ನಂಜೆ, ಅಬೂಬಕ್ಕರ್ ಮದನಿ, ಇಸ್ಮಾಯಿಲ್ ಮದನಿ, ಅಬೂಬಕ್ಕರ್ ಖಾಸಿಮಿ, ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಝೈನುದ್ದೀನ್ ಹಾಜಿ ಮುಕ್ವೆ, ಆದಂ ದಾರಿಮಿ, ಅಬ್ದುಲ್ ಹಮೀದ್ ಹಾಜಿ ಸುಳ್ಯ, ಇಕ್ಬಾಲ್ ಬಾಳಿಲ, ನಿಝಾಂ ಅರಂಡ, ಅಬ್ದುಲ್ ರಝಾಕ್ ಹಾಜಿ ಮನಿಲ, ಇಸ್ಮಾಯಿಲ್ ಕೆಮ್ಮಿಂಜೆ, ಮುಹಮ್ಮದ್ ಕುಕ್ಕುವಳ್ಳಿ, ನೂರ್ ಮುಹಮ್ಮದ್ ನೀರ್ಕಜೆ, ರಫೀಕ್ ಮಂಗಳೂರು, ಅಬ್ದುಲ್ಲಾಹ್ ಶೇಖಮಲೆ, ತ್ವಲ್‌ಹತ್ ಪರ್ಲಡ್ಕ, ಅಬ್ದುಲ್ ರಝಾಕ್ ಸೋಂಪಾಡಿ, ಉಮ್ಮರ್ ಶಾಫಿ ಇಂಜಿನಿಯರ್, ಬಾತಿಷಾ ಹಾಜಿ ಪಾಟ್ರಕೋಡಿ, ಅಬ್ದುಲ್ಲ ಬೊಳ್ಳಡಿ, ಅಬ್ದುಲ್ ಖಾದರ್ ಚೆಡವು, ಫಾರೂಕ್ ಸಂಟ್ಯಾರ್, ಅಬ್ದುಲ್ ಖಾದರ್ ಕೂರ್ನಡ್ಕ, ಶರೀಫ್ ಕೂರ್ನಡ್ಕ, ಸಿದ್ದೀಕ್ ಕೂಡುರಸ್ತೆ, ಸಲಾಂ ಈಶ್ವರಮಂಗಿಲ, ಝಕರಿಯಾ ಕೊರಿಂಗಿಲ, ಹಫೀಝ್ ಅಡ್ಡೂರು, ಹಸೈನಾರ್ ಕೊಡುಂಗಾಯಿ, ಯಾಸಿರ್ ಅರಾಫತ್ ಕೌಸರಿ, ಇಬ್ರಾಹಿಂ ಮುಸ್ಲಿಯಾರ್ ಆತೂರು, ಎಂಎಸ್ ಅಬ್ದುಲ್ ಹಮೀದ್, ಅಬ್ದುಲ್ ಹಮೀದ್ ಮನಿಲ, ಅಬ್ದುಲ್ ಸತ್ತಾರ್ ಒಳತ್ತಡ್ಕ, ಆದಂ ಮುಕ್ರಂಪಾಡಿ, ಹನೀಫ್ ಬಿಸಿರೋಡು, ಹಾಶಿರ್ ನಂಜೆ, ಅಬ್ದುಲ್ ರಹಿಮಾನ್ ಅಝಾದ್, ಆಸಿಫ್ ಕೂಟತ್ತಾನ, ಶಂಸುದ್ದೀನ್ ಹನೀಫಿ, ಅಬ್ದುಲ್ಲಾ ನಹೀಮಿ, ಅಶ್ರಫ್ ಅಂಜದಿ, ಅಬ್ದುಲ್ ರಹಿಮಾನ್ ಅರ್ಕುಳ, ಬಶೀರ್ ಕೌಡಿಚ್ಚಾರ್, ಅಶ್ರಫ್ ಬುಳೇರಿಕಟ್ಟೆ, ಶಾಫಿ ಪೆರುವಾಯಿ, ಅಬ್ದುಲ್ಲಾ ಕೋಯಿಲ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿ ಸ್ವಾಗತಿಸಿ, ವ್ಯವಸ್ಥಾಪಕರಾದ ಅಬ್ದುಲ್ ಸತ್ತಾರ್ ಕೌಸರಿ ಧನ್ಯವಾದ ಸಮರ್ಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News