ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ವಚ್ಛ ಭಾರತ ಅಭಿಯಾನ

Update: 2024-10-08 18:14 GMT

ಮಂಗಳೂರು : ಆರೋಗ್ಯಕರ ಮನಸ್ಸು ಮತ್ತು ಸ್ವಚ್ಛ ಪರಿಸರದ ನಡುವೆ ಸಂಬಂಧವಿದೆ. ದೈಹಿಕ ಚಟುವಟಿಕೆ, ಉತ್ತಮ ಆಹಾರ ಪದ್ಧತಿ ಬೆಳೆಸಿಕೊಳ್ಳುವುದು ಆರೋಗ್ಯಕರ ದೃಷ್ಟಿಯಿಂದ ಉತ್ತಮ ಎಂದು ಯೆನೆಪೊಯ ವಿವಿಯಲ್ಲಿ ವಿಸ್ತರಣಾ ವಿಭಾಗದ ನಿರ್ದೇಶಕಿ ಡಾ.ಅಶ್ವಿನಿ ಎಸ್ ಶೆಟ್ಟಿ ಅಭಿಪ್ರಾಯಪಟ್ಟರು.

ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT) ಅ. 7 ರಂದು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಆಯೋಜಿಸಿದ್ದ "ಆರೋಗ್ಯಕರ ಮನಸ್ಸು - ಕ್ಲೀನ್ ಕ್ಯಾಂಪಸ್" ಎಂಬ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಂಕ್ ಫುಡ್ ಗಳನ್ನು ತ್ಯಜಿಸಿದರೆ ಉತ್ತಮ ಆರೋಗ್ಯ ಬೆಳೆಸಿಕೊಳ್ಳಬಹುದು. ಶ್ವಾಸಕೋಶಗಳು, ಹೃದಯ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯಂತಹ ಅಂಗಗಳ ಮೇಲೆ ಜಂಕ್ ಫುಡ್ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಅವರು ವಿವರಿಸಿದರು.

ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ ಅವರು ವಿದ್ಯಾರ್ಥಿಗಳನ್ನು ಶಾಲೆಗಳನ್ನು ದತ್ತು ತೆಗೆದುಕೊಂಡು ಹಿಂದುಳಿದ ಸಮುದಾಯಗಳಿಗೆ ಬೆಂಬಲ ನೀಡುವಂತೆ ಕರೆ ನೀಡಿದರು. ಇತರರಿಗೆ ಸಹಾಯ ಮಾಡುವುದರಿಂದ ಸಿಗುವ ಸಂತೃಪ್ತಿಯ ಬಗ್ಗೆ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಬಿಐಟಿಯ ಪ್ರಾಂಶುಪಾಲರಾದ ಡಾ.ಎಸ್.ಐ.ಮಂಜುರ್ ಬಾಷಾ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ನಳಿನಿ ಇ ರೆಬೆಲ್ಲೋ, ಎನ್.ಎಸ್.ಎಸ್ ಅಧಿಕಾರಿ ಡಾ.ಕಫೀಲ್ ಡೆಲ್ವಿ, ಎನ್.ಎಸ್.ಎಸ್ ಸಂಯೋಜಕ ಪ್ರೊ.ಬದ್ರುದ್ದೀನ್ ಪಿ.ಎಂ. ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಕ್ಯಾಂಪಸ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.









 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News