ಕಣ್ಣೂರ್ ಆಂಗ್ಲ ಮಾಧ್ಯಮ ಶಾಲೆ, ಮಹಿಳಾ ಪಿಯು ಕಾಲೇಜು ವತಿಯಿಂದ ಶಿಕ್ಷಕರ ದಿನಾಚರಣೆ

Update: 2024-09-05 21:41 IST
ಕಣ್ಣೂರ್ ಆಂಗ್ಲ ಮಾಧ್ಯಮ ಶಾಲೆ, ಮಹಿಳಾ ಪಿಯು ಕಾಲೇಜು ವತಿಯಿಂದ ಶಿಕ್ಷಕರ ದಿನಾಚರಣೆ
  • whatsapp icon

ಮಂಗಳೂರು: ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ ಹಾಗೂ ಮಹಿಳಾ ಪದವಿ ಪೂರ್ವ ಕಾಲೇಜು ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಗುರುವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಹಾಜಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಶಾಲಾ ಸಂಚಾಲಕ ರಿಯಾಝ್ ಮಾತನಾಡಿದರು.

ವೇದಿಕೆಯಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿ ಸಂಶಾದ್, ಕಾಲೇಜು ಪ್ರಾಂಶುಪಾಲರಾದ ವಿಶಾಲಾಕ್ಷಿ ಅರಬಿಕ್ ಅಧ್ಯಾಪಕ ಇಸ್ಮಾಯೀಲ್ ಯಮಾನಿ, ಇರ್ಫಾನ್ ಅಸ್ಲಮಿ ಉಪಸ್ಥಿತರಿದ್ದರು.

9ನೇ ತರಗತಿ ವಿದ್ಯಾರ್ಥಿನಿಗಳಾದ ಖತೀಜ ರಿಝ ಸ್ವಾಗತಿಸಿದರು, ನಝೀಫ್ ಹಸನ್ ಪ್ರಾರ್ಥಿಸಿದರು, ರಮ್ಲನಮೀಶ ಕಾರ್ಯಕ್ರಮ ನಿರೂಪಿಸಿ, ಖತೀಜ ರಿಝ ವಂದಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News