ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ವೈದ್ಯರಲ್ಲಿ ಚರ್ಚಿಸಿ ದ ಡಿವೈಎಫ್ಐ

Update: 2023-11-08 10:21 GMT
ಉಳ್ಳಾಲ: ಉಳ್ಳಾಲ ತಾಲೂಕು ಡಿವೈಎಫ್ಐ ಮುಖಂಡರು ಸಮುದಾಯ ಆರೋಗ್ಯ ಕೇಂದ್ರ ಕ್ಕೆ ದಿಡೀರ್ ಭೇಟಿ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ವೈದ್ಯರಲ್ಲೇ ಚರ್ಚೆ ನಡೆಸಿದ  ಘಟನೆ ಬುಧವಾರ ನಡೆಯಿತು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರ ದ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ತಿಂಗಳ ಹಿಂದೆ ಪ್ರತಿಭಟನೆ ನಡೆಸಿ ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ ಅವರಿಗೆ ಅರ್ಪಿಸಿದ್ದೆ ವು.ಎರಡು ವಾರಗಳ ಒಳಗೆ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಯಾವುದೇ ಸಮಸ್ಯೆ ಪರಿಹಾರ ಆಗಿಲ್ಲ ‌. ಇದಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು  ಮಕ್ಕಳ ತಜ್ಞ ಡಾ.ತಾರಾ ಅವರಲ್ಲಿ ಪ್ರಶ್ನಿಸಿದರು
 ಬಳಿಕ ಮಾಧ್ಯಮ ಜೊತೆ  ಉಳ್ಲಾಲ ತಾಲೂಕು ಡಿವೈಎಫ್ಐ ಅಧ್ಯಕ್ಷ ರಜಾಕ್ ಮೊಂಟೆಪದವು ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್,ಸಿಟಿ ಸ್ಕ್ಯಾನ್, ಆಪರೇಷನ್, ಗಂಡಸರ ವಾರ್ಡ್, ವಿಶೇಷ ವಾರ್ಡ್ ಇನ್ನೂ ಕಾರ್ಯಗತವಾಗಿಲ್ಲ . ಮುಂಬೈ ಸೋನು ಸೂದ್ ಕಂಪೆನಿ ಕೊಡುಗೆ ಆಗಿ ನೀಡಿದ ಆಮ್ಲಜನಕ ಕೊಠಡಿ ಮುಚ್ಚಿದ್ದು, ಬಾಗಿಲುಗಳು ತುಕ್ಕು ಹಿಡಿದಿವೆ .ಶಸ್ತ್ರ ಚಿಕಿತ್ಸೆ, ಸಿಟಿ ಸ್ಕ್ಯಾನ್,ಗಂಡಸರ ವಾರ್ಡ್ ಸಹಿತ ಬಹಳಷ್ಟು ವಾರ್ಡ್ಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.
ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಉಳ್ಲಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಸುದ್ದಿ ಗೋಷ್ಠಿ ಕರೆದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ ಅಂದಿದ್ದರು.ಅವರು ಎಷ್ಟು ರಾಜಕೀಯ ಮಾಡಲಿ.ಆದರೆ ಜನರ ಆರೋಗ್ಯ ದ ವಿಚಾರದಲ್ಲಿ ರಾಜಕೀಯ ಬೇಡ.ಸರ್ಕಾರ ಈ ಆಸ್ಪತ್ರೆ ಯನ್ನು ಖಾಸಗಿಯವರಿಗೆ ಗುತ್ತಿಗೆ ವಹಿಸಿ ಕೊಟ್ಟ ಕಾರಣ ಈ ಅವ್ಯವಸ್ಥೆ ಸೃಷ್ಟಿ ಆಗಿದೆ.ಇದರ ಬದಲು ಸರ್ಕಾರ ವೇ ವೈದ್ಯರನ್ನು ನೇಮಕ ‌ಮಾಢಿ ಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಡಿವೈಎಫ್ಐ ಮುಖಂಡರಾದ, ಸುಕುಮಾರ್, ಸಿಪಿಐಎಂ, ರಿಜ್ವಾನ್,ಅಶ್ಫಾಕ್ ಅಲೇಕಳ,, ರಫೀಕ್ ಹರೇಕಳ, ಇಬ್ರಾಹಿಂ ಮದಕ, ರಜಾಕ್ ಮುಡಿಪು, ವಿಕಾಸ್ ಕುತ್ತಾರ್, ನೌಶಾದ್ ಕುರ್ನಾಡು, ಬಶೀರ್ ಹರೇಕಳ,ಧೀರಜ್ ಕುತ್ತಾರ್, ನೌಪಾಲ್ ಕೋಟೆಪುರ, ವಾಕರ್ ಕೋಟೆಪುರ ಉಪಸ್ಥಿತರಿದ್ದರು.
Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News