ಯಶಸ್ಸಿಗೆ ಮೊದಲು ಸೋಲುವುದನ್ನು ಕಲಿಯಬೇಕು: CPOD ಮುಖ್ಯಸ್ಥ ಮುಹಮ್ಮದ್ ಫೈಝಲ್

Update: 2024-09-27 18:06 GMT

ಮಂಗಳೂರು: ವಿದ್ಯಾರ್ಥಿಗಳು ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು, ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಯಶಸ್ಸಿಗೆ ಮೊದಲು ಸೋಲುವುದನ್ನು ಕಲಿಯಬೇಕು ಎಂದು ಪಿ ಎ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಸೆಂಟರ್ ಫಾರ್ ಪ್ರೊಫೆಷನಲ್ ಆ್ಯಂಡ್ ಆರ್ಗನೈಝೇಷನಲ್ ಡೆವೆಲಪ್ಮೆಂಟ್ (CPOD) ಮುಖ್ಯಸ್ಥ ಮುಹಮ್ಮದ್ ಫೈಝಲ್ ಹೇಳಿದರು.

IEEE ಮಂಗಳೂರು ವತಿಯಿಂದ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (BIT) IEEE ವಿದ್ಯಾರ್ಥಿ ಶಾಖೆಯ ಸಹಯೋಗದೊಂದಿಗೆ "ಇಂಜಿನಿಯರಿಂಗ್ ಯುವರ್ ಬ್ರಾಂಡ್: ಪರ್ಸನಲ್ ಬ್ರಾಂಡಿಂಗ್ ಫಾರ್ ಸಕ್ಸಸ್" ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವೈಫಲ್ಯಗಳನ್ನು ಮೌಲ್ಯಯುತವಾದ ಕಲಿಕೆಯ ಅನುಭವಗಳಾಗಿ ನೋಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು ವೈಯಕ್ತಿಕ ಬ್ರ್ಯಾಂಡಿಂಗ್ ಮತ್ತು ವೃತ್ತಿಪರ ಅಭಿವೃದ್ಧಿಯಲ್ಲಿ ತಮ್ಮ ಪರಿಣತಿಯನ್ನು ಹಂಚಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಅಬ್ದುಲ್ಲಾ ಗುಬ್ಬಿ ವಿದ್ಯಾರ್ಥಿಗಳಲ್ಲಿ ಸಮಗ್ರ ಅಭಿವೃದ್ಧಿಯ ಮಹತ್ವವನ್ನು ವಿವರಿಸಿದರು. ಶೈಕ್ಷಣಿಕವಾಗಿ ಮಾತ್ರವಲ್ಲದೆ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಕೌಶಲ್ಯಗಳನ್ನು ಬೆಳೆಸುವ ಅಗತ್ಯವನ್ನು ತಿಳಿಸಿದರು. ತಮ್ಮ ಶೈಕ್ಷಣಿಕ ಪ್ರಯಾಣದ ಆರಂಭದಲ್ಲಿ ವೈಯಕ್ತಿಕ ಬ್ರ್ಯಾಂಡ್ ಅನ್ನು ನಿರ್ಮಿಸಲು ಅಗತ್ಯ ವಾದ ತಂತ್ರಗಳನ್ನು ಕಲಿಯಲು ಈ ಕಾರ್ಯಗಾರವನ್ನು ಬಳಸಿಕೊಳ್ಳಲು ಅವರು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ಬಿಐಟಿಯ ಇಂಟರ್‌ನ್ಯಾಶನಲ್ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೇಸಿಕ್ ಸೈನ್ಸ್ ವಿಭಾಗದ ಪ್ರೊ. ಜಾಯ್ಸನ್ ಎಂ. ವಂದಿಸಿದರು.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News