ಉಳ್ಳಾಲ: ಗೇರು ಮೇಳ, ವಿಚಾರ ಸಂಕಿರಣ 2024

Update: 2024-03-06 10:30 GMT

ಉಳ್ಳಾಲ: ಗೇರು ಕೃಷಿ ಯನ್ನು ಅನಿವಾರ್ಯವಾಗಿ ಬಯಸಬೇಕು. ಆಸಕ್ತಿ ಇಟ್ಟುಕೊಂಡು ಗೇರು ಕೃಷಿ ಗೆ ಒತ್ತು ನೀಡಿದರೆ ಕೃಷಿ ಅಭಿವೃದ್ಧಿ ಸಾಧ್ಯ. ಕೃಷಿಕರು ಕೇವಲ ಒಂದೇ ಕೃಷಿಗೆ ಒತ್ತು ಕೊಡುವುದು ಜಾಸ್ತಿ. ಇದರ ಬದಲು ಎಲ್ಲಾ ಕೃಷಿ ಗೆ ಸಮಾನವಾಗಿ ಒತ್ತು ನೀಡಿದರೆ ಮಾತ್ರ ಬೇರೆ ಬೇರೆ ಬೆಳೆಗಳನ್ನು ಪಡೆಯಲು ನಮಗೆ ಸಾಧ್ಯವಾಗುತ್ತದೆ ಎಂದು ಕೃಷಿ ಇಲಾಖೆ ದ.ಕ.ಜಿಲ್ಲಾ ಜಂಟಿ ನಿರ್ದೇಶಕ ಡಾ.ಕೆಂಪೇಗೌಡ ಹೇಳಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಗೇರು ಮತ್ತು ಕೊಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾಪಿಕಾಡ್ ನಲ್ಲಿ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ 2024 ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿಯ ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ ಮಾತನಾಡಿ, ಗೇರು ಬೆಳೆಗೆ ಉತ್ತೇಜನ ರಾಜ್ಯ ಮಟ್ಟದಲ್ಲಿ ಸಿಗುತ್ತದೆ. ಬಹಳಷ್ಟು ಮಂದಿ ಗೇರು ಕೃಷಿಕರು ಇದ್ದಾರೆ.ಗೇರು ದೇಶದ ಆರ್ಥಿಕತೆ ಯನ್ನು ಗಣನೀಯವಾಗಿ ಹೆಚ್ಚುತ್ತಿದೆ.ಉತ್ಪಾದನೆ ಕೂಡ ಜಾಸ್ತಿ ಇದೆ. ವಿದೇಶಿ ವಿನಿಮಯಕ್ಕೆ ಗೇರು ಅತೀ ಮುಖ್ಯವಾದರೂ ಮಾರುಕಟ್ಟೆ ಸಮಸ್ಯೆ ಇದೆ.ಇದು ಪರಿಹಾರ ಆಗಬೇಕು ಎಂದು ಹೇಳಿದರು

ಕಾರ್ಯಕ್ರಮ ವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿಯ ಸಂಶೋಧನಾ ನಿರ್ದೇಶಕ ಡಾ.ದುಷ್ಯಂತ್ ಕುಮಾರ್ ಉದ್ಘಾಟಿಸಿದರು. ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿದರು. ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದರು.

ಕಾರ್ಯಕ್ರಮ ದಲ್ಲಿ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಹೆಚ್.ಎನ್.ಆಂಜನೇಯಪ್ಪ, ರೈತ ಸಂಘ ರಾಜ್ಯ ಗೌರವಾಧ್ಯಕ್ಷ ಮನೋಹರ್ ಶೆಟ್ಟಿ, ಬ್ರಹ್ಮಾವರ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ ಬಿ.,ಡಾ.ರಮೇಶ್ ಟಿ.ಜೆ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಗತಿ ಪರ ಕೃಷಿಕರಾದ ದಯಾನಂದ ಭಟ್ ಮೂಡುಬಿದಿರೆ, ಪ್ರೇಮಾ ಹೆಗಡೆ, ನಿರಂಜನ್ ಸೇಮಿತ, ನವೀನ್ ಚಂದ್ರ ಜಾತುಬಾಯಿ ಸುಳ್ಯ, ವಿಲ್ಮಾ ಪ್ರಿಯಾ ಅಲ್ಬುಕರ್ಕ್ ಅವರನ್ನು ಸನ್ಮಾನಿಸಲಾಯಿತು.

ವ.ಕೃ.ತೋ.ಸಂ.ಕೇ.ಬ್ರಹ್ಮಾವರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ದ ಮುಖ್ಯಸ್ಥ ಡಾ.ಮಾರುತೇಶ್ ಎ.ಎಂ. ಸ್ವಾಗತಿಸಿದರು.

ಪ್ರವೀಣ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಉಳ್ಳಾಲ ಕೃ.ತೋ.ಸಂ.ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಆರತಿ ಯಾದವಾಡ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News