ಉಳ್ಳಾಲ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟ: ಟಿಪ್ಪು ಸುಲ್ತಾನ್ ತಂಡ ಪ್ರಥಮ

Update: 2024-08-21 08:43 GMT

ಮಂಗಳೂರು:ನೆಹರೂ ಮೈದಾನದಲ್ಲಿ ನಡೆದ ಉಳ್ಳಾಲ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟದಲ್ಲಿ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧೀನಕ್ಕೆ ಒಳಪಟ್ಟ ಟಿಪ್ಪು ಸುಲ್ತಾನ್ ಪಿ.ಯು ಕಾಲೇಜು ಫುಟ್ಬಾಲ್ ತಂಡವು ಪ್ರಥಮ ಸ್ಥಾನ ಪಡೆದಿದೆ.

ಟಿಪ್ಪು ಸುಲ್ತಾನ್ ಪಿ.ಯು ಕಾಲೇಜು ತಂಡವು ಆಗಸ್ಟ್ 15ರಂದು ನಡೆದ ಸ್ವಾತಂತ್ರೋತ್ಸವ ಫುಟ್ಬಾಲ್ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತ್ತು . ಇದೀಗ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ವಿಜಯಿಯಾಗಿ ಕಾಲೇಜಿನ ಹಿರಿಮೆಗೆ ಪಾತ್ರವಾಗಿದೆ.

ತಂಡದ ಜಯಕ್ಕೆ ಕಾರಣರಾದ ಎಲ್ಲಾ ಆಟಗಾರರನ್ನು ಮತ್ತು ತಂಡದ ತರಬೇತುದಾರ ರಶೀದ್ ಅವರನ್ನು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News