ಉಳ್ಳಾಲ: ಟೈಲರಿಂಗ್ ಕೋರ್ಸ್‌ ವಿದ್ಯಾರ್ಥಿನಿಯರಿಗೆ ಸರ್ಟಿಫಿಕೇಟ್ ವಿತರಣೆ

Update: 2024-05-02 07:16 GMT

ಉಳ್ಳಾಲ : 'ಮಹಿಳೆಯರು ತಮ್ಮದೇ ಆದ ಸ್ವಉದ್ಯೋಗವನ್ನು ಮನೆಯಿಂದಲೇ ನಡೆಸಲು ಟೈಲರಿಂಗ್ ವೃತ್ತಿ ಹೆಚ್ಚು ಪೂರಕ ಮತ್ತು ಲಾಭದಾಯವೂ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಸಂಯೋಜಕ ಫಾರೂಕ್ ಉಳ್ಳಾಲ್ ಹೇಳಿದರು.

ಸಮಸ್ತ ಅಧೀನದ ಉಳ್ಳಾಲ ಎಸ್ ವೈಎಸ್ ಉಳ್ಳಾಲ ಘಟಕದ ವತಿಯಿಂದ ಉಚಿತವಾಗಿ ತರಬೇತಿ ಪಡೆದು ತೇರ್ಗಡೆಗೊಂಡ 35 ಮಂದಿ ವಿದ್ಯಾರ್ಥಿನಿಯರಿಗೆ ಸರ್ಟಿಫಿಕೇಟ್ ವಿತರಣಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಎಸ್ಕೆಎಸ್ಸೆಸೆಫ್ ಜಿಲ್ಲಾ ಉಪಾಧ್ಯಕ್ಷ ಆಸಿಫ್ ಅಬ್ದುಲ್ಲಾ ಮಾತನಾಡಿ, 'ಕಳೆದ ಎರಡೂವರೆ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹೊಲಿಗೆ ತರಬೇತಿ ತರಗತಿಯಲ್ಲಿ ಈಗಾಗಲೇ ಎರಡು ಬ್ಯಾಚ್ ಗಳ ನೂರಕ್ಕೂ ಅಧಿಕ ಯುವತಿಯರು ಟೈಲರಿಂಗ್ ಪದವಿ ಪಡೆದಿರುವುದು ಎಸ್.ವೈ.ಎಸ್ ಉಳ್ಳಾಲ ಘಟಕದ ಸೇವಾತತ್ಪರತೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಿಸ್ಬಾ ಇಲೆಕ್ಟ್ರಿಕಲ್ಸ್ ಮಾಲ್ಹಕ ಸಿದ್ದೀಕ್ ಮೂಸ, ಮಾತನಾಡಿದರು. ಎಸ್ ವೈಎಸ್ ಉಳ್ಳಾಲ ಘಟಕ ಅಧ್ಯಕ್ಷ ಕೆ.ಎಸ್.ಮೊಯ್ದಿನ್ ತೇರ್ಗಡೆ ಸರ್ಟಿಫಿಕೇಟ್ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ಶಂಸುಲ್ ಉಲಮಾ ಚಾರೀಟೇಬಲ್ ಟ್ರಸ್ಟ್ ನ ಅಧ್ಯಕ್ಷ ಯು.ಟಿ.ಮುಹಮ್ಮದ್ ಹಾಜಿ, ಟೈಲರಿಂಗ್ ಶಿಕ್ಷಕಿ ನಸೀಮಾ ಅಬ್ದುಲ್ ಸಲಾಂ ಹಾಗೂ ಈ ಬಾರಿ ಪವಿತ್ರ ಮಕ್ಕಾ ಯಾತ್ರೆ ಕೈಗೊಳ್ಳಲಿರುವ  ಬಶೀರ್ ಗುಂಡಿಹಿತ್ತಿಲು ಮತ್ತು ಎಸ್ ವೈ ಎಸ್ ಅಧ್ಯಕ್ಷ ಕೆ.ಎಸ್ . ಮೊಯ್ದಿನ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ರಝಾಕ್ ಹರೇಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News