ಉಳ್ಳಾಲ | ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಯು.ಎಚ್.ಅಲ್ತಾಫ್ ಹಳೇಕೋಟೆ ಆಯ್ಕೆ
Update: 2025-04-15 15:09 IST

ಉಳ್ಳಾಲ : ಶಿವಾಜಿ ಫ್ರೆಂಡ್ಸ್ ಸರ್ಕಲ್ ಭಟ್ನಗರ ತೊಕ್ಕೊಟ್ಟು ಇದರ 2025-2026ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಗೌರವ ಅಧ್ಯಕ್ಷರಾಗಿ ಸದಾನಂದ ಒಂಬತ್ತುಕೆರೆ, ಅಧ್ಯಕ್ಷರಾಗಿ ಯು.ಎಚ್.ಅಲ್ತಾಫ್ ಹಳೇಕೋಟೆ, ಉಪಾಧ್ಯಕ್ಷರಾಗಿ ಪುರುಷೋತ್ತಮ, ಪ್ರದಾನ ಕಾರ್ಯದರ್ಶಿಯಾಗಿ ರೋಹನ್ ತೊಕ್ಕೊಟ್ಟು, ಜೊತೆಕಾರ್ಯದರ್ಶಿಯಾಗಿ ಸುಧೀರ್ ತೊಕ್ಕೊಟ್ಟು, ಕೋಶಾಧಿಕಾರಿಯಾಗಿ ಯು.ಎಂ.ಹಮೀದ್ ಮುಕ್ಕಚೇರಿ, ಕ್ರೀಡಾಕಾರ್ಯದರ್ಶಿಯಾಗಿ ಕಮಲಾಕ್ಷ, ಲೆಕ್ಕಪರಿಶೋಧಕರಾಗಿವಾಸು ಗಟ್ಟಿ ತೊಕ್ಕೊಟ್ಟು, ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಸತ್ಯರಾಜ್ ಹಾಗೂ ಒಂಭತ್ತು ಮಂದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಯಿತು.