ಶಾಲಾ ಬಸ್‌ಗಳ ಟ್ರ್ಯಾಕಿಂಗ್‌ಗೆ ಆ್ಯಪ್ ಬಳಸಿ: ಮಂಗಳೂರು ಮೇಯರ್ ಸೂಚನೆ

Update: 2023-11-06 17:01 GMT

ಮಂಗಳುರು : ನಗರದಲ್ಲಿ ಶಾಲಾ ಬಸ್‌ಗಳ ಟ್ರ್ಯಾಕಿಂಗ್‌ಗೆ ಸಂಬಂಧಿಸಿದಂತೆ ಶಾಲಾ ಆಡಳಿತ, ಹೆತ್ತವರು ಆಯಾ ಮಕ್ಕಳ ಶಾಲಾ ಬಸ್ ಸಾಗುತ್ತಿರುವ ಮಾರ್ಗ ಮತ್ತು ಸ್ಥಳೀಯ ಮಾಹಿತಿಯನ್ನು ITouchMangaluru.com ಮೊಬೈಲ್ ಆ್ಯಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ಮೇಯರ್ ಸುಧೀರ್ ಕಣ್ಣೂರು ತಿಳಿಸಿದ್ದಾರೆ.

ಈಗಾಗಲೆ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಸಾರ್ವಜನಿಕರಿಗೆ ಸ್ಥಳೀಯ ಓಡಾಟದ ಅನುಕೂಲಕ್ಕಾಗಿ ಸಿಟಿ ಬಸ್‌ಗಳ ಮಾರ್ಗ, ಸಮಯ, ಸ್ಥಳ ಮತ್ತಿತರ ಮಾಹಿತಿಯನ್ನು ಒದಗಿಸುವ ಹಿತದೃಷ್ಟಿಯಿಂದ ITouchMangaluru.com ಮೊಬೈಲ್ ಆ್ಯಪ್ ಬಳಸಲಾಗುತ್ತಿವೆ. ಇದೀಗ ಶಾಲಾ ಬಸ್‌ಗಳ ಬಗ್ಗೆಯೂ ಆ್ಯಪ್ ಮೂಲಕ ತಿಳಿಯಬಹುದಾಗಿದೆ.

ಆದ್ದರಿಂದ ಶಾಲಾ ಬಸ್‌ಗಳಲ್ಲಿ ಜಿಪಿಎಸ್ ಅಳವಡಿಸಲು ಅದರ ಮಾಹಿತಿಯನ್ನು ಮಂಗಳೂರು ಸ್ಮಾರ್ಟ್ ಸಿಟಿಗೆ ಎಪಿಐ ಮೂಲಕ ಸಂವಹನ ಮಾಡಬಹುದು. ಈ ಸೌಲಭ್ಯವನ್ನು ನಗರದ ಎಲ್ಲಾ ಶಾಲೆಗಳು ಉಪಯೋಗಿಸಿ ಪ್ರಯೋಜನ ಪಡೆಯಬಹುದಾಗಿದೆ. ಶಾಲಾ ಆಡಳಿತ ಸಂಬಂಧಪಟ್ಟ ಅರ್ಜಿ ಭರ್ತಿ ಮಾಡಿ ಮಂಗಳೂರು ಸ್ಮಾರ್ಟ್ ಸಿಟಿಗೆ ಸಲ್ಲಿಸಬೇಕು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News