ಮಂಗಳೂರಿನಲ್ಲಿ ಹಜ್ ಯಾತ್ರಿಕರಿಗೆ ವ್ಯಾಕ್ಸಿನೇಷನ್

ಮಂಗಳೂರು, ಎ.24: ಕೇಂದ್ರ ಹಜ್ ಕಮಿಟಿ ಮೂಲಕ ಈ ವರ್ಷ ಹಜ್ ಯಾತ್ರೆ ಕೈಗೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯ ಹಜ್ ಯಾತ್ರಿಕರಿಗೆ ವ್ಯಾಕ್ಸಿನೇಷನ್ ಶಿಬಿರ ನಗರದ ಜೆಪ್ಪಿನಮೊಗರುವಿನ ಯೇನಪೋಯ ಸ್ಕೂಲ್‌ನಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯ ಹಜ್ ಕಮಿಟಿಯ ಸದಸ್ಯ ಶರಫುಸ್ಸಾದಾತ್ ಸಯ್ಯಿದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ಅವರು, ಈ ಬಾರಿ ಕೇಂದ್ರ ಹಜ್ ಸಮಿತಿಯ ಮೂಲಕ ದ.ಕ. ಜಿಲ್ಲೆಯಿಂದ 1,097 ಮಂದಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಅವರೆಲ್ಲರಿಗೂ ಯೆನಪೋಯ ಆಸ್ಪತ್ರೆಯ ಮೂಲಕ ವ್ಯಾಕ್ಸಿನೇಶನ್ ವ್ಯವಸ್ಥೆಯನ್ನು ಮಾಡಲಾಗಿದೆ. ಹಜ್ ಯಾತ್ರಿಕರನ್ನು ಹೊತ್ತ ಮೊದಲ ವಿಮಾನವು ಎ.28ರಂದು ಬೆಂಗಳೂರಿನಿಂದ ಹೊರಡಲಿದೆ ಎಂದರು.
ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ, ಉಪಾಧ್ಯಕ್ಷ ಮಹಮೂದ್ ಹಾಜಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ಯೆನೆಪೋಯ ಆಸ್ಪತ್ರೆಯ ನಿರ್ದೇಶಕರಾದ ಡಾ. ಮುಹಮ್ಮದ್ ತಾಹಿರ್, ಯೆನೆಪೋಯ ಸಮೂಹ ಸಂಸ್ಥೆಯ ನಿರ್ದೇಶಕ ಖುರ್ಷಿದ್ ಅಹ್ಮದ್, ಜಿಲ್ಲಾ ವಕ್ಫ್ ಅಧಿಕಾರಿ ಎಂ. ಅಬೂಬಕರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್ ಬಿ.ವಿ, ದ.ಕ. ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ , ಪ್ರಮುಖರಾದ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಹನೀಫ್ ಹಾಜಿ, ಇಬ್ರಾಹೀಂ ಕೊಣಾಜೆ, ರಿಯಾಝ್ ಹಾಜಿ, ಫಝಲ್ ಹಾಜಿ, ಸಿ.ಎಚ್.ಉಳ್ಳಾಲ, ಅಹ್ಮದ್ ಬಾವಾ ಮೊಯ್ದೀನ್, ಸೈಯ್ಯದ್ ಮಿಅರಾಜ್ ತಂಙಳ್, ರಫೀಕ್ ಕೊಡಾಜೆ, ಎ.ಕೆ. ಜಮಾಲ್ , ಸುಲೈಮಾನ್ ಕರಾಯ ಉಪಸ್ಥಿತರಿದ್ದರು.