ವಿಟ್ಲ: ರಾಜ್ಯ ಹೆದ್ದಾರಿಯ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

Update: 2024-11-26 09:21 GMT

ವಿಟ್ಲ: ಆಟೋ ರಿಕ್ಷಾ, ಟೂರಿಸ್ಟ್ ಕಾರು, ಖಾಸಗಿ ಬಸ್, ಲಾರಿ ಮಾಲಕರ ಸಂಘದ ವತಿಯಿಂದ ವಿಟ್ಲ-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಕಾರರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಹಾಕಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿ, ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತಿಭಟನಾ ಕಾರರು ತಮ್ಮ ಅಳಲನ್ನು ತೋಡಿಕೊಂಡು ಕೋಡಲೇ ರಸ್ತೆ ಹೊಂಡವನ್ನು ಮುಚ್ಚುವಂತೆ ವಿನಂತಿಸಿದರು. ಈ ವೇಳೆ ಅಧಿಕಾರಿಗಳು ಮಾತನಾಡಿ ಕೆಲಸದ ಬಗೆಗಿನ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ. ಕೆಲವೇ ದಿನಗಳಲ್ಲಿ ಈ ಭಾಗದ ಢಾಮರೀಕರಣ ಪ್ರಕ್ರೀಯೆ ಆರಂಭಗೊಳ್ಳಲಿದೆ ಎಂದರು. ಈ ವೇಳೆ ಮತ್ತಷ್ಟು ಕೆರಳಿದ ಪ್ರತಿಭಟನಾ ಕಾರರು ಮೂರು ದಿನದೊಳಗೆ ರಸ್ತೆ ಹೊಂಡವನ್ನು ಮುಚ್ಚದಿದ್ದಲ್ಲಿ ವಿಟ್ಲ ನಾಲ್ಕು ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದರು. ಬಳಿಕ ಪ್ರತಿಭಟನಾ ಕಾರರ‌ನ್ನು ಸಮಾಧಾನ ಪಡಿಸಿದ ಅಧಿಕಾರಿಗಳು ಕೂಡಲೇ ಹೊಂಡಮುಚ್ಚುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಲ ಪ್ರತಿಭಟನಾ ಕಾರರು ಪ್ರತಿಭಟನೆಯನ್ನು ಹಿಂಪಡೆದರು.

ರಸ್ತೆ ತಡೆದು ಪ್ರತಿಭಟನೆ ಮಾಡಿದರ ಪ್ರತಿಭಟನೆ ಮಾಡಿದ ಪರಿಣಾಮ ಸುಮಾರು ಅರ್ಧ ತಾಸುಗಳ ವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಿಟ್ಲ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟು,ಬಸ್ ಮಾಲಕರಾದ ಅರುಣ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿಪ್ರಕಾಶ್ ವಿಟ್ಲ, ಲಾರಿ ಮಾಲಕ ಚಾಲಕ ಸಂಘದ ಅಧ್ಯಕ್ಷರಾದ ರಮೇಶ್ ವರಪ್ಪಾದೆ, ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ವಸಂತ ಎನ್, ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಉದಯಕುಮಾರ್ ಆಲಂಗಾರು, ಪ್ರಮುಖರಾದ‌ ಕೃಷ್ಣಯ್ಯ ವಿಟ್ಲ, ಬಿಜೆಪಿ ಪಕ್ಷದ ಪ್ರಮುಖರಾದ ಮೋಹನದಾಸ್ ಉಕ್ಕುಡ, ನರಸಪ್ಪ ಪೂಜಾರಿ, ಸದಾನಂದ ಗೌಡ ಸೇರಾಜೆ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್, ಜಯಂತ್, ವಸಂತ,ರಿಕ್ಷ ಮಾಲಕರಾದ ವೆಂಕಪ್ಪ ನಾಯ್ಕ್ , ಬಾಸ್ಕರ, ಲಾರಿ ಮಾಲಕರಾದ ಜಯಪ್ರಕಾಶ್ , ಹರೀಶ್ ಉಮಾಮಹೇಶ್ವರ, ನಾಗೇಶ್ ಬಸವನಗುಡಿ ಸೇರಿದಂತೆ ನೂರಾರು ನಾಗರಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News