ವಿಟ್ಲ: ಡ್ರೆಸ್ ಶಾಪ್ ಗೆ ನುಗ್ಗಿದ ಮೂವರ ತಂಡ; ಮಹಿಳಾ ಸಿಬ್ಬಂದಿಯನ್ನು ಬೆದರಿಸಿ ದರೋಡೆ

Update: 2025-03-19 13:11 IST
ವಿಟ್ಲ: ಡ್ರೆಸ್ ಶಾಪ್ ಗೆ ನುಗ್ಗಿದ ಮೂವರ ತಂಡ; ಮಹಿಳಾ ಸಿಬ್ಬಂದಿಯನ್ನು ಬೆದರಿಸಿ ದರೋಡೆ

ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು 

  • whatsapp icon

ವಿಟ್ಲ: ಡ್ರೆಸ್ ಶಾಪ್ ನಲ್ಲಿ ಒಂಟಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಅಂಗಡಿಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ ನವೀನ್ ಕುಂಪಲ ಮತ್ತು ಇತರ ಮೂರು ಮಂದಿಯ ತಂಡ, ಆಕೆಯನ್ನು ಬೆದರಿಸಿ ಅಂಗಡಿಯಲ್ಲಿದ್ದ ಬಟ್ಟೆ ಮತ್ತು ಇತರ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಶಾಲಾ ರಸ್ತೆ ಬಳಿ ನಡೆದಿದೆ.

ಮಾರ್ಚ್ 18 ರಂದು ಮಧ್ಯಾಹ್ನ ವೇಳೆ ಘಟನೆ ನಡೆದಿದೆ. ಏಕಾಏಕಿ ಅಂಗಡಿಗೆ ಅಕ್ರಮ ಪ್ರವೇಶಿಸಿದ ನಾಲ್ಕು ಮಂದಿಯ ತಂಡ, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಗೂ ಬಟ್ಟೆಯನ್ನು ತಮ್ಮ ಬ್ಯಾಗಿನೊಳಗೆ ತುಂಬಿಸಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾಗ ಮಹಿಳಾ ಸಿಬ್ಬಂದಿಯು ಯಾಕೆ ಬಟ್ಟೆಗಳನ್ನು ತುಂಬಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಆರೋಪಿಗಳು “ನಿನಗೆ ಎಷ್ಟು ಕೆಲಸವಿದೆಯೋ ಅಷ್ಟೇ ಮಾಡು, ನಮ್ಮ ಸುದ್ದಿಗೆ ಬಂದ್ರೆ ಜಾಗ್ರತೆ” ಎಂದು ಬೆದರಿಸಿ ಬಲಾತ್ಕಾರದಿಂದ ಬಟ್ಟೆ ಮತ್ತು ವಸ್ತುಗಳನ್ನು ಕೊಂಡೊಯ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News