ಯೆನೆಪೋಯ ದಂತ ವೈದ್ಯಕೀಯ ಕಾಲೇಜಿಗೆ ʼಏಷ್ಯಾದ ಅತ್ಯುತ್ತಮ ದಂತ ವೈದ್ಯಕೀಯ ಕಾಲೇಜು' ಪ್ರಶಸ್ತಿ

Update: 2025-04-30 12:39 IST
ಯೆನೆಪೋಯ ದಂತ ವೈದ್ಯಕೀಯ ಕಾಲೇಜಿಗೆ ʼಏಷ್ಯಾದ ಅತ್ಯುತ್ತಮ ದಂತ ವೈದ್ಯಕೀಯ ಕಾಲೇಜು ಪ್ರಶಸ್ತಿ
  • whatsapp icon

ಮಂಗಳೂರು : ಅಮೆರಿಕ ಮೂಲದ ಪಿಯರೆ ಫೌಚರ್ಡ್ ಅಕಾಡೆಮಿಯು ಯೆನೆಪೋಯ ದಂತ ವೈದ್ಯಕೀಯ ಕಾಲೇಜಿಗೆ ʼಅತ್ಯುತ್ತಮ ಅಂತಾರಾಷ್ಟ್ರೀಯ ದಂತ ವೈದ್ಯಕೀಯ ಕಾಲೇಜು' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

'ಏಷ್ಯಾದ ಅತ್ಯುತ್ತಮ ದಂತ ವೈದ್ಯಕೀಯ ಆಸ್ಪತ್ರೆ' ವಿಭಾಗದಲ್ಲಿ ಪಿಯರೆ ಫೌಚರ್ಡ್ ಅಕಾಡೆಮಿ ಈ ಪ್ರಶಸ್ತಿಯನ್ನು ಯೆನೆಪೋಯ ದಂತ ವೈದ್ಯಕೀಯ ಕಾಲೇಜಿಗೆ ನೀಡಿದೆ. ಎಪ್ರಿಲ್ 5 ಮತ್ತು 6ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಪಿಯರೆ ಫೌಚರ್ಡ್ ಅಕಾಡೆಮಿ ಕಾನ್ಫರೆನ್ಸ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

1936ರಲ್ಲಿ ಸ್ಥಾಪಿತವಾದ ಈ ಅಕಾಡೆಮಿಗೆ ಆಧುನಿಕ ದಂತ ವೈದ್ಯಶಾಸ್ತ್ರದ ಪಿತಾಮಹ ಪಿಯರೆ ಫೌಚರ್ಡ್ ಅವರ ಹೆಸರಿಡಲಾಗಿತ್ತು. ವಿಶ್ವದ ದಂತ ವಿಜ್ಞಾನ ಕ್ಷೇತ್ರಗಳಲ್ಲಿನ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಅಕಾಡೆಮಿಯು ಗೌರವಿಸುತ್ತದೆ.




 



 



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News