ಝಲೇಖಾ ನರ್ಸಿಂಗ್ ಕಾಲೇಜು ಘಟಿಕೋತ್ಸವ
ಮಂಗಳೂರು: ಯೆನೆಪೋಯ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಪ್ರೈ.ಲಿ. ಇದರ ಅಂಗ ಸಂಸ್ಥೆ ಝುಲೇಖಾ ಕಾಲೇಜಿನ ಘಟಿಕೋತ್ಸವ ಹಾಗೂ ವಾರ್ಷಿಕೋತ್ಸವ ʼಝೆನಿತ್ 2023ʼ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಸುಚಿತಾ ನಂದಗೋಪಾಲ್ ಸೆಂಟರ್ ಫಾರ್ ಇಂಟೆಗ್ರೇಟೆಡ್ ನರ್ಸಿಂಗ್ ಮಂಗಳೂರು ಹಾಗೂ ಸಾಮಾಜಿಕ ಕಾರ್ಯಕರ್ತೆ ಯೂತ್ ಆ್ಯಂಡ್ ಲೀಡರ್ ಶಿಪ್ ಮೆಂಟರ್ ಅವರು ಕಾಲೇಜಿನ ಇ - ಮ್ಯಾಗಜಿನ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ಒಬ್ಬ ಶುಶ್ರೂಷಕಿಯು ಸಹಾನುಭೂತಿ, ಆರೈಕೆ, ಬದ್ಧತೆ ಹಾಗೂ ಸಾಮಥ್ರ್ಯ ಇವೆಲ್ಲಾ ಗುಣಗಳನ್ನು ಹೊಂದಿರಬೇಕು ಎಂದು ಹೇಳಿ ತಮ್ಮ ಸೇವೆಯ ಅನುಭವಗಳನ್ನು ಹಂಚಿಕೊಂಡು ಪದವೀಧರರಿಗೆ ಶುಭ ಹಾರೈಸಿದರು.
ಪಿ.ಕೆ. ನಸ್ರೀನ್ ಅಬ್ದುಲ್ಲಾ ಯೆನೆಪೋಯ ಗ್ರೂಪ್ ಇವರು ಗೌರವ ಅತಿಥಿ ಸ್ಥಾನವನ್ನು ಅಲಂಕರಿಸಿದ್ದರು. ಫರ್ವೀನ್ ತಾಹಿರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಡಾ.ಆರ್. ಕನಗವಲ್ಲಿ ವಾರ್ಷಿಕ ವರದಿ ಮಂಡಿಸಿದರು. ಉಪ ಪ್ರಾಂಶುಪಾಲೆ ಲಿಜಿಯಾ ವಿ. ಹಾಲ್ಡರ್ ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು. ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಪ್ರಾಧ್ಯಾಪಕಿ ಡಾ.ಜಿ. ಪ್ರತಿಭಾ ಸ್ವಾಗತಿಸಿದರು. ಪ್ರಾಧ್ಯಾಪಕ ಗೌತಮ್ ಬಿ. ಆರ್. ವಂದಿಸಿದರು.