2005ರ ಶ್ರಮಜೀವಿ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣ: ಇಬ್ಬರನ್ನು ತಪ್ಪಿತಸ್ಥರು ಎಂದು ಎತ್ತಿಹಿಡಿದ ನ್ಯಾಯಾಲಯ

Update: 2023-12-23 15:33 GMT

ಜೌನಪುರ: 14 ಜನರು ಕೊಲ್ಲಲ್ಪಟ್ಟಿದ್ದ 2005ರ ಶ್ರಮಜೀವಿ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಇಬ್ಬರನ್ನು ತಪ್ಪಿತಸ್ಥರನ್ನಾಗಿಸಿ ಸ್ಥಳೀಯ ನ್ಯಾಯಾಲಯವು ತೀರ್ಪು ನೀಡಿದೆ.

ನಫಿಕುಲ್ ವಿಶ್ವಾಸ್ ಮತ್ತು ಹಿಲಾಲ್ ದೋಷನಿರ್ಣಯಕ್ಕೆ ಗುರಿಯಾಗಿದ್ದಾರೆ. ನ್ಯಾಯಾಲಯವು ಜ.2ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

2005,ಜು.28ರಂದು ಸಂಜೆ ಐದು ಗಂಟೆಯ ಸುಮಾರಿಗೆ ಜೌನಪುರ ನಿಲ್ದಾಣದ ಬಳಿ ಪಾಟ್ನಾ-ಹೊಸದಿಲ್ಲಿ ಶ್ರಮಜೀವಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಸ್ಫೋಟ ಸಂಭವಿಸಿ 14 ಜನರು ಮೃತಪಟ್ಟಿದ್ದರು ಮತ್ತು ಇತರ 62 ಜನರು ಗಾಯಗೊಂಡಿದ್ದರು.

ರೈಲು ಹರ್ಪಾಲಗಂಜ ರೈಲ್ವೆ ನಿಲ್ದಾಣವನ್ನು ದಾಟಿ ಹರಿಹರಪುರ ರೈಲ್ವೆ ಕ್ರಾಸಿಂಗ್ ತಲುಪುತ್ತಿದ್ದಂತೆ ಭಾರೀ ಸ್ಫೋಟವು ಸಂಭವಿಸಿತ್ತು. ಬೋಗಿಯಲ್ಲಿನ ಟಾಯ್ಲೆಟ್‌ನಲ್ಲಿ ಆರ್‌ಡಿಎಕ್ಸ್‌ನ್ನು ಇಡಲಾಗಿತ್ತು.

ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಂತೆ ಜೌನಪುರದಲ್ಲಿ ಇಬ್ಬರು ಯುವಕರು ಬಿಳಿಬಣ್ಣದ ಸೂಟ್‌ಕೇಸ್‌ನೊಂದಿಗೆ ರೈಲನ್ನು ಹತ್ತಿದ್ದು,ಕೆಲವು ಸಮಯದ ಬಳಿಕ ಸೂಟ್‌ಕೇಸ್ ಇಲ್ಲದೆ ಚಲಿಸುತ್ತಿದ್ದ ರೈಲಿನಿಂದ ಹಾರಿ ಪರಾರಿಯಾಗಿದ್ದರು. ನಂತರ ಕೆಲವೇ ನಿಮಿಷಗಳಲ್ಲಿ ಸ್ಫೋಟ ಸಂಭವಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News