ಚತ್ತೀಸ್ ಗಢ: 22 ನಕ್ಸಲೀಯರ ಬಂಧನ, ಸ್ಫೋಟಕ ವಶ
File photo | Photo Credit: PTI
ಬಿಜಾಪುರ: ಚತ್ತೀಸ್ ಗಢದ ಬಿಜಾಪುರ ಜಿಲ್ಲೆಯ ಮೂರು ಸ್ಥಳಗಳಿಂದ 22 ಶಂಕಿತ ನಕ್ಸಲೀಯರನ್ನು ಬಂಧಿಸಲಾಗಿದೆ ಹಾಗೂ ಅವರಿಂದ ಸ್ಪೋಟಕ ಸಮಾಗ್ರಿಗಳನ್ನು ಪಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕೋಬ್ರಾ(ಕಮಾಂಡೊ ಬೆಟಾಲಿಯನ್ ಪಾರ್ ರೆಸಲ್ಯೂಟ್ ಆ್ಯಕ್ಷನ್-ಸಿಆರ್ಪಿಎಫ್ನ ಉನ್ನತ ಘಟಕ) ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡ ಜಂಟಿ ತಂಡ ನಕ್ಸಲ್ ನಿಗ್ರಹ ಕಾರ್ಯಾಚರಣೆ ಆರಂಭಿಸಿದಾಗ ಉಸೂರ್ ಪೊಲೀಸ್ ಠಾಣಾ ವ್ಯಾಪ್ತಿಯ ತೆಕುಮಾತಲಾ ಗ್ರಾಮದ ಸಮೀಪದ ಅರಣ್ಯದಿಂದ ಮಂಗಳವಾರ 7 ಮಂದಿ ಶಂಕಿತ ನಕ್ಸಲೀಯರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು 6 ಮಂದಿ ಶಂಕಿತ ನಕ್ಸಲೀಯರನ್ನು ಜಂಗ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬೆಲ್ಚಾರ್ ಗ್ರಾಮದ ಕೋಟೆಯೊಂದರಿಂದ ಬಂಧಿಸಲಾಗಿದೆ. ಇತರ 9 ಮಂದಿ ಶಂಕಿತ ನಕ್ಸಲೀಯರನ್ನು ನೆಲಸ್ನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಕಾರ್ಕ ಗ್ರಾಮದಲ್ಲಿರುವ ಅರಣ್ಯದಿಂದ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಎರಡು ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಪ್ರತ್ಯೇಕ ಜಂಟಿ ತಂಡ ಭಾಗಿಯಾಗಿದೆ.
ಟಿಫಿನ್ ಬಾಂಬ್, ಜೆಲೆಟಿನ್ ಸ್ಟಿಕ್, ಡಿಟೋನೇಟರ್, ಇಲೆಕ್ಟ್ರಿಕ್ ವಯರ್, ಬ್ಯಾಟರಿ, ಮಾವೋವಾದಿ ಕರಪತ್ರ ಹಾಗೂ ಇತರ ವಸ್ತುಗಳು ಬಂಧಿತ ಶಂಕಿತ ನಕ್ಸಲೀಯರಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.