ಪ್ರಧಾನಿಯಿಂದ ಜಾರ್ಖಂಡ್ ನಲ್ಲಿ 35,700 ಕೋ.ರೂ. ವೆಚ್ಚದ ಯೋಜನೆ ಲೋಕಾರ್ಪಣೆ
Update: 2024-03-01 15:51 GMT
ಸಿಂದ್ರಿ: ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ನಲ್ಲಿ 35,700 ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಶುಕ್ರವಾರ ಉದ್ಘಾಟಿಸಿದರು ಹಾಗೂ ಶಂಕು ಸ್ಥಾಪನೆ ನೆರವೇರಿಸಿದರು.
ಹಲವು ಯೋಜನೆಗಳಲ್ಲಿ ಅವರು ಧನ್ಬಾದ್ ಜಿಲ್ಲೆಯ ಸಿಂದ್ರಿಯಲ್ಲಿ ಹಿಂದೂಸ್ಥಾನ್ ಉರ್ವರಕ್ ಆ್ಯಂಡ್ ರಸಾಯನ್ ಲಿಮಿಟೆಡ್ ನ 8,900 ಕೋಟಿ ರೂ. ವೆಚ್ಚದ ರಸಗೊಬ್ಬರ ಘಟಕವನ್ನು ದೇಶಕ್ಕೆ ಅರ್ಪಿಸಿದರು.
ಪ್ರಧಾನಿ ಅವರು ಜಾರ್ಖಂಡ್ ನಲ್ಲಿ 26,000 ಕೋಟಿ ರೂ. ವೆಚ್ಚದ ರೈಲು, ವಿದ್ಯುತ್ ಹಾಗೂ ಕಲ್ಲಿದ್ದಲು ಯೋಜನೆಯನ್ನು ಕೂಡ ಲೋಕಾರ್ಪಣೆಗೊಳಿಸಿದರು.
‘‘ಜಾರ್ಖಂಡ್ ಗೆ 35,000 ಕೋಟಿ ರೂ. ವೆಚ್ಚದ ಯೋಜನೆ ಉಡುಗೊರೆಯಾಗಿ ದೊರಕಿದೆ. ಇದು ಸಿಂದ್ರಿ ರಸಗೊಬ್ಬರ ಘಟಕವನ್ನು ನವೀಕರಿಸುವ ಮೋದಿ ಅವರ ಗ್ಯಾರಂಟಿ ಹಾಗೂ ಇದನ್ನು ಇಂದು ಈಡೇರಿಸಲಾಗಿದೆ. ಈ ಘಟಕವನ್ನು ದೇಶಕ್ಕೆ ಅರ್ಪಿಸುವ ಮೂಲಕ ಭಾರತ ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲಿದೆ’’ ಎಂದು ಪ್ರಧಾನಿ ಹೇಳಿದರು.