ಒಂದೇ ದಿನ ಕೋವಿಡ್ ನ 760 ಹೊಸ ಪ್ರಕರಣಗಳು
Update: 2024-01-04 16:43 GMT
ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ನ 760 ಹೊಸ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಕೋವಿಡ್ ಸೋಂಕಿನ 4,423 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಕೇರಳ ಹಾಗೂ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಗುರುವಾರ ಬೆಳಗ್ಗೆ ಪರಿಷ್ಕೃತಗೊಂಡ ಸಚಿವಾಲಯ ದತ್ತಾಂಶ ತಿಳಿಸಿದೆ.
ಡಿಸೆಂಬರ್ 5ರ ವರೆಗೆ ದಿನನಿತ್ಯದ ಕೋವಿಡ್ ಪ್ರಕರಣಗಳ ಸಂಖ್ಯೆ ಎರಡಂಕೆಗೆ ಇಳಿಕೆಯಾಗಿದೆ. ಆದರೆ, ಕೋವಿಡ್ ನ ಉಪ ಪ್ರಭೇದ ಹಾಗೂ ಶೀತ ವಾತಾವರಣ ಸ್ಥಿತಿಯ ಕಾರಣದಿಂದ ಈ ಸಂಖ್ಯೆ ಅನಂತರ ಏರಿಕೆಯಾಗಿದೆ.