ಪತಿಯೊಂದಿಗೆ ವಾಸಿಸಲು ಮಗುವಿನೊಂದಿಗೆ ನೊಯ್ಡಾಕ್ಕೆ ಬಂದ ಬಾಂಗ್ಲಾದೇಶಿ ಮಹಿಳೆ

Update: 2023-08-22 22:41 IST
ಪತಿಯೊಂದಿಗೆ ವಾಸಿಸಲು ಮಗುವಿನೊಂದಿಗೆ ನೊಯ್ಡಾಕ್ಕೆ ಬಂದ ಬಾಂಗ್ಲಾದೇಶಿ ಮಹಿಳೆ
  • whatsapp icon

ನೊಯ್ಡಾ: ಉತ್ತರ ಪ್ರದೇಶ ಪೊಲೀಸರನ್ನು ಸಂಪರ್ಕಿಸಿರುವ ಬಾಂಗ್ಲಾದೇಶಿ ಮಹಿಳೆಯೋರ್ವಳು, ಮೂರು ವರ್ಷಗಳ ಹಿಂದೆ ಢಾಕಾದಲ್ಲಿ ತನ್ನನ್ನು ಮದುವೆಯಾಗಿದ್ದ ಪತಿ ಬಳಿಕ ತನ್ನನ್ನು ತೊರೆದು ಹಾಲಿ ನೊಯ್ಡಾದಲ್ಲಿ ವಾಸವಾಗಿದ್ದಾನೆ ಮತ್ತು ತಾನು ಆತನ ಜೊತೆಯಲ್ಲಿರಲು ಬಯಸಿದ್ದೇನೆ ಎಂದು ತಿಳಿಸಿದ್ದಾಳೆ.

ಸೋನಿಯಾ ಅಖ್ತರ್ ತಾನು ಢಾಕಾ ನಿವಾಸಿ ಎಂದು ಹೇಳಿಕೊಂಡಿದ್ದು, ಸೆಂಟ್ರಲ್ ನೊಯ್ಡಾದ ಸೂರಜ್‌ಪುರ ಪ್ರದೇಶದ ನಿವಾಸಿ ಸೌರಭಕಾಂತ್ ತಿವಾರಿ ತನ್ನ ಪತಿ ಎಂದು ತಿಳಿಸಿದ್ದಾಳೆ.

ಸೋಮವಾರ ಪೊಲೀಸ್ ಬೆಂಗಾವಲಿನಲ್ಲಿ ಹೋಗುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಖ್ತರ್, ‘ಆತ ಈಗ ಒಪ್ಪುತ್ತಿಲ್ಲ, ಆತ ನನ್ನನ್ನು ತನ್ನ ಮನೆಗೆ ಕರೆದೊಯ್ಯುತ್ತಿಲ್ಲ. ನಾನು ಬಾಂಗ್ಲಾದೇಶಿಯಾಗಿದ್ದೇನೆ. ಸುಮಾರು ಮೂರು ವರ್ಷಗಳ ಹಿಂದೆ ನಾವು ಮದುವೆಯಾಗಿದ್ದೆವು. ನನ್ನ ಮಗುವಿನೊಂದಿಗೆ ಪತಿಯ ಜೊತೆ ವಾಸವಾಗಿರುವುದನ್ನಷ್ಟೇ ನಾನು ಬಯಸಿದ್ದೇನೆ’ ಎಂದು ತಿಳಿಸಿದರು.

ಅಖ್ತರ್ ದೂರಿನ ಮೇಲೆ ಇಲ್ಲಿಯ ಮಹಿಳಾ ಠಾಣಾ ಪೊಲೀಸರು ಪ್ರಕರಣದಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ.

ಅಖ್ತರ್ ತನ್ನ ಬಾಂಗ್ಲಾದೇಶಿ ಪೌರತ್ವ ಕಾರ್ಡ್‌ನೊಂದಿಗೆ ತನ್ನ ಮತ್ತು ಮಗುವಿನ ವೀಸಾ ಹಾಗೂ ಪಾಸ್‌ಪೋರ್ಟ್ ವಿವರಗಳನ್ನು ಒದಗಿಸಿದ್ದಾರೆ ಎಂದು ಹೆಚ್ಚುವರಿ ಡಿಸಿಪಿ ರಾಜೀವ ದೀಕ್ಷಿತ ತಿಳಿಸಿದರು.

ಪೊಲೀಸರ ಪ್ರಕಾರ ತಿವಾರಿ 2017,ಜ.4ರಿಂದ 2021,ಡಿ.24ರವರೆಗೆ ಢಾಕಾದ ಖಾಸಗಿ ಸಂಸ್ಥೆಯೊಂರಲ್ಲಿ ಉದ್ಯೋಗದಲ್ಲಿದ್ದ. ಅದಾಗಲೇ ಭಾರತೀಯ ಮಹಿಳೆಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ಆತ 2021,ಎ.14ರಂದು ಅಖ್ತರ್‌ರನ್ನು ಮದುವೆಯಾಗಿದ್ದ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News