ಸೈಫ್ ಅಲಿ ಖಾನ್ ಗೆ ಚೂರಿ ಇರಿತ : ಹೊಂದಿಕೆಯಾಗದ ಬಂಧಿತ ಆರೋಪಿಯ ಬೆರಳಚ್ಚು!

Update: 2025-01-26 17:33 IST
ಸೈಫ್ ಅಲಿ ಖಾನ್ ಗೆ ಚೂರಿ ಇರಿತ : ಹೊಂದಿಕೆಯಾಗದ ಬಂಧಿತ ಆರೋಪಿಯ ಬೆರಳಚ್ಚು!

Photo credit: PTI

  • whatsapp icon

ಮುಂಬೈ: ನಟ ಸೈಫ್ ಅಲಿಖಾನ್ ಅವರ ಮೇಲೆ ಚೂರಿ ಇರಿತ ಮತ್ತು ದರೋಡೆಗೆ ಯತ್ನ ನಡೆದ ಬಾಂದ್ರಾದ ನಿವಾಸದಿಂದ ಸಂಗ್ರಹಿಸಲಾದ 19 ಸೆಟ್ ಬೆರಳಚ್ಚುಗಳು ಬಂಧಿತ ಆರೋಪಿ ಶರೀಫುಲ್ ಇಸ್ಲಾಂನ ಬೆರಳಚ್ಚುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಪ್ರಕರಣದ ತನಿಖೆಯಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಮುಂಬೈ ಪೊಲೀಸರು ಖಾನ್ ಅವರ ಮನೆಯಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ರಾಜ್ಯ ಅಪರಾಧ ತನಿಖಾ ವಿಭಾಗದ(ಸಿಐಡಿ) ಫಿಂಗರ್‌ ಫ್ರಿಂಟ್ ಬ್ಯೂರೋಗೆ ಕಳುಹಿಸಿದ್ದಾರೆ. ಬೆರಳಚ್ಚುಗಳನ್ನು ಪರಿಶೀಲನೆ ನಡೆಸಿದಾಗ ಬಂಧಿತ ಆರೋಪಿ ಶರೀಫುಲ್ ಬೆರಳಚ್ಚುಗಳಿಗೆ ಹೊಂದಿಕೆಯಾಗಿಲ್ಲ. ಪರೀಕ್ಷೆಯ ಫಲಿತಾಂಶವನ್ನು ʼನೆಗೆಟಿವ್ʼ ಎಂದು ಮುಂಬೈ ಪೊಲೀಸರಿಗೆ ಸಿಐಡಿ ಮಾಹಿತಿ ನೀಡಿದೆ. ಮುಂಬೈ ಪೊಲೀಸರು ಈ ಕುರಿತು ಹೆಚ್ಚಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ಜನವರಿ 15ರಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿ ದರೋಡೆಗೆ ಯತ್ನಿಸಿ ಅವರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದ. ಸೈಫ್ ಅಲಿ ಖಾನ್ ದೇಹದ ಮೇಲೆ 6 ಗಾಯದ ಗುರುತುಗಳು ಪತ್ತೆಯಾಗಿದ್ದವು. ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಐದು ದಿನಗಳ ಚಿಕಿತ್ಸೆ ಬಳಿಕ ಮಂಗಳವಾರ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News