ಜೂನ್ 4ರಂದು ಭಾರತಕ್ಕೆ ಹೊಸ ಅರುಣೋದಯ: ತಮಿಳುನಾಡು ಸಿಎಂ ಸ್ಟಾಲಿನ್

Update: 2024-06-01 15:00 GMT

ಎಂ.ಕೆ.ಸ್ಟಾಲಿನ್ | PTI 

ಹೊಸದಿಲ್ಲಿ: ಮತಏಣಿಕೆಯ ದಿನವಾದ ಜೂನ್ 4 ಭಾರತಕ್ಕೆ ಹೊಸ ಅರುಣೋದಯವಾಗಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಇಂದಿನ ಸಭೆಯಲ್ಲಿ ಮುಂದಿನ ಕಾರ್ಯತಂತ್ರ ರೂಪಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

ಫ್ಯಾಶಿಸ್ಟ್ ಬಿಜೆಪಿಯ 10 ವರ್ಷಗಳ ಆಳ್ವಿಕೆಗೆ ಅಂತ್ಯ ಹಾಡುವುದೇ ಪ್ರತಿಪಕ್ಷ ಮೈತ್ರಿಕೂಟವನ್ನು ರಚಿಸುವ ಉದ್ದೇಶವಾಗಿದ್ದು, ಅದನ್ನು ಸಾಧಿಸಿರುವಂತೆ ತೋರುತ್ತದೆ. ತನಗೆ ಸವಾಲೆಸೆಯುವಂತಹ ಯಾವುದೇ ಪ್ರತಿಪಕ್ಷವಿಲ್ಲವೆಂದು ಭಾವಿಸಿರುವ ಬಿಜೆಪಿಯ ವಿರುದ್ಧ ಪ್ರಜಾತಾಂತ್ರಿಕ ಶಕ್ತಿಗಳ ಬಲಿಷ್ಠ ಮೈತ್ರಿಕೂಟವನ್ನು ರೂಪಿಸುವಲ್ಲಿ ವಿಪಕ್ಷಗಳು ಯಶಸ್ವಿಯಾಗಿವೆ. ಈ ಮೈತ್ರಿಕೂಟವು ದೇಶದ ಜನತೆಗೆ ಭರವಸೆಯನ್ನು ತಂದುಕೊಟ್ಟಿದೆ ಎಂದರು.

ಸಾರ್ವಜನಿಕ ವಲಯದಲ್ಲಿ ಬಿಜೆಪಿಯು ಅದರ ಬಗ್ಗೆ ಸೃಷ್ಟಿಸಿದ್ದ ಹುಸಿ ವರ್ಚಸ್ಸನ್ನು ಇಂಡಿಯಾ ಮೈತ್ರಿಕೂಟ ಕಳಚಿದೆ. ಮತಏಣಿಕೆಗೆ ಕೇವಲ ಮೂರು ದಿನಗಳು ಉಳಿದಿರುವಂತೆಯೇ, ಮತಏಣಿಕೆ ಪ್ರಕ್ರಿಯೆ ಸಂದರ್ಭದಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಸ್ಟಾಲಿನ್ ಅವರು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News