ಸುಮಾರು 1 ಗಂಟೆ ಫೇಸ್ಬುಕ್‌, ಇನ್‌ಸ್ಟಾಗ್ರಾಮ್‌ ಜಾಗತಿಕ ಸ್ಥಗಿತದಿಂದಾಗಿ 3 ಬಿಲಿಯನ್‌ ಡಾಲರ್‌ ಸಂಪತ್ತು ಕಳೆದುಕೊಂಡ ಝುಕರ್ ಬರ್ಗ್‌: ವರದಿ

Update: 2024-03-06 07:00 GMT

ಮಾರ್ಕ್‌ ಝುಕರ್ ಬರ್ಗ್‌ | Photo: NDTV 

ಹೊಸದಿಲ್ಲಿ: ಮೆಟಾ ಸಂಸ್ಥೆಯ ಪ್ರಮುಖ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂ ಇವುಗಳು ಮಂಗಳವಾರ ಒಂದು ಗಂಟೆ ಕಾಲ ಎದುರಿಸಿದ ಜಾಗತಿಕ ಸ್ಥಗಿತದ ನಂತರ ಒಂದೇ ದಿನದಲ್ಲಿ ಮೆಟಾ ಸಿಇಒ ಮಾರ್ಕ್‌ ಝುಕರ್ ಬರ್ಗ್‌ ಅವರು 3 ಬಿಲಿಯನ್‌ ಡಾಲರ್‌ (ಸುಮಾರು 24,871 ಕೋಟಿ ರೂ.) ಕಳೆದುಕೊಂಡಿದ್ದಾರೆ ಎಂದು indiatoday.in ವರದಿ ಮಾಡಿದೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ನಲ್ಲಿ ಝುಕರ್ ಬರ್ಗ್‌ ಅವರ ಒಟ್ಟು ಸಂಪತ್ತು ಒಂದು ದಿನದಲ್ಲಿ 2.79 ಬಿಲಿಯನ್‌ ಡಾಲರ್‌ ಇಳಿಕೆಯಾಗಿ 176 ಬಿಲಿಯನ್‌ ಡಾಲರ್‌ಗೆ ತಲುಪಿದೆ.

ಒಂದು ಗಂಟೆ ಕಾಲ ಇದ್ದ ಜಾಗತಿಕ ಸ್ಥಗಿತದಿಂದಾಗಿ ಮೆಟಾ ಷೇರುಗಳ ಮೌಲ್ಯವೂ ಶೇ 1.6ರಷ್ಟು ಕುಸಿತ ಕಂಡು ಝುಕರ್ ಬರ್ಗ್‌ ಅವರ ಸಂಪತ್ತಿನ ಮೌಲ್ಯದಲ್ಲಿ ಇಳಿಕೆಗೆ ಕಾರಣವಾಯಿತು. ಮಂಗಳವಾರದ ಟ್ರೇಡಿಂಗ್‌ ಅವಧಿ ವಾಲ್‌ಸ್ಟ್ರೀಟ್‌ನಲ್ಲಿ ಅಂತ್ಯವಾಗುವ ವೇಳೆ ಮೆಟಾ ಷೇರು ಬೆಲೆ 490.22 ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News