ಆಹಾರ ವಿತರಕರ ವೇತನವನ್ನು ಬಹಿರಂಗಪಡಿಸಿ: ʼಬ್ಲಿಂಕಿಟ್ʼ ಸಿಇಒಗೆ ಕುನಾಲ್ ಕಾಮ್ರಾ ಆಗ್ರಹ

Update: 2025-01-01 11:42 GMT

PC : NDTV 

ಹೊಸದಿಲ್ಲಿ: ಗ್ರಾಹಕರ ದೂರುಗಳು ಮತ್ತು ದೋಷಪೂರಿತ ಸೇವೆಗಳ ಕುರಿತು ಓಲಾ ಸಿಇಒ ಭವಿಶ್ ಅಗರ್ವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಕಾಮೆಡಿಯನ್ ಕುನಾಲ್ ಕಾಮ್ರಾ ಇದೀಗ ತ್ವರಿತ ವಾಣಿಜ್ಯ ವೇದಿಕೆಗಳಲ್ಲಿ ಆಹಾರ ವಿತರಕರ(ಗಿಗ್ ಕಾರ್ಮಿಕರ) ಶೋಷಣೆಯ ಬಗ್ಗೆ ಬೆಳಕನ್ನು ಚೆಲ್ಲುವ ಪೋಸ್ಟ್ ಮಾಡಿದ್ದಾರೆ.

ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂಡ್ಸಾ, ಎಕ್ಸ್ ನಲ್ಲಿನ ಹೆಚ್ಚು ಆರ್ಡರ್ ಮಾಡಿದ ಐಟಂಗಳ ಕುರಿತು ಹೇಳುತ್ತಾ, 1,22,356 ಕಾಂಡೋಮ್ ಪ್ಯಾಕ್‌ ಗಳು, 45,531 ಮಿನರಲ್ ವಾಟರ್ ಬಾಟಲಿಗಳು, 22,322 ಪಾರ್ಟಿಸ್ಮಾರ್ಟ್, 2,434 ಎನೋ ಇದೀಗ ಹಾದಿಯಲ್ಲಿದೆ! ಪಾರ್ಟಿಗೆ ತಯಾರಿ? ಎಂದು ಪೋಸ್ಟ್ ಮಾಡಿದ್ದರು.

ಈ ಕುರಿತ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಕಾಮೆಡಿಯನ್ ಕುನಾಲ್ ಕಮ್ರಾ, 2024ರಲ್ಲಿ ನೀವು ನಿಮ್ಮ ವಿತರಣಾ ಪಾಲುದಾರರಿಗೆ ಪಾವತಿಸಿದ ಸರಾಸರಿ ವೇತನದ ಅಂಕಿ-ಅಂಶಗಳನ್ನು ನಮಗೆ ತಿಳಿಸಬಹುದೇ? ಎಂದು ಪ್ರಶ್ನಿಸಿದ್ದಾರೆ. ಬ್ಲಿಂಕಿಟ್, ಝೊಮಾಟೊ, ಸ್ವಿಗ್ಗಿ ಮುಂತಾದ ಡೆಲಿವರಿ ಕಂಪೆನಿಗಳು ತಮ್ಮ ವಿತರಣಾ ಕೆಲಸಗಾರರನ್ನು ಕಂಪನಿಯ ಉದ್ಯೋಗಿಗಳೆಂದು ಗುರುತಿಸಲು ಸತತವಾಗಿ ನಿರಾಕರಿಸಿದೆ. ಬದಲಾಗಿ, ಅವರನ್ನು "ಪಾಲುದಾರರು" ಎಂದು ಹೇಳುತ್ತದೆ, ಅವರು ಒಂದು ಅಥವಾ ಹೆಚ್ಚಿನ ಕಂಪೆನಿಗಳಿಗೆ ಕೆಲಸ ಮಾಡಲು ಆಯ್ಕೆ ಮಾಡಬಹುದು. ಆಹಾರ ವಿತರಕರನ್ನು ಉದ್ಯೋಗಿಗಳೆಂದು ಘೋಷಿಸಲು ನಿರಾಕರಿಸುವ ಮೂಲಕ ಅವರಿಗೆ ನ್ಯಾಯಯುತ ಸಂಬಳ, ವೈದ್ಯಕೀಯ ವಿಮೆ ಮತ್ತು ನೌಕರರು ನಿರೀಕ್ಷಿಸಬಹುದಾದ ಇತರ ಸವಲತ್ತುಗಳನ್ನು ಪಾವತಿಸುವುದನ್ನು ತಪ್ಪಿಸುತ್ತವೆ ಎಂದು ಹೇಳಿದ್ದಾರೆ,

ಈ ಕುರಿತು ಮುಂದುವರಿದ ಪೋಸ್ಟ್‌ ನಲ್ಲಿ, ಕುನಾಲ್ ಕಾಮ್ರಾ ತ್ವರಿತ ವಾಣಿಜ್ಯ ವೇದಿಕೆಗಳ ಕರಾಳ ಮುಖವನ್ನು ವಿವರಿಸಿದ್ದಾರೆ. ಇಂತಹ ವೇದಿಕೆಗಳ ಮಾಲಕರು ಆಹಾರ ವಿತರಕರನ್ನು ಶೋಷಣೆ ಮಾಡುತ್ತಿದ್ದಾರೆ, ನಾವು ತ್ವರಿತ ವಾಣಿಜ್ಯ ವೇದಿಕೆಗಳ ಅನುಕೂಲತೆಯ ಬಗ್ಗೆ ವಿವರಿಸುವಾಗ 2025ರ ಮೊದಲ ಟ್ವೀಟ್ ನಲ್ಲಿ ಈ ವೇದಿಕೆಗಳ ಕರಾಳ ಮುಖದ ಬಗ್ಗೆ ಹೇಳಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

Blinkit, Swiggy Instamart ಮತ್ತು Zeptoದಂತಹ ಪ್ರಮುಖ ತ್ವರಿತ ವಾಣಿಜ್ಯ ವೇದಿಕೆಗಳು ಭಾರತದ ಪ್ರಮುಖ ನಗರಗಳಲ್ಲಿ ಕೆಲವೇ ನಿಮಿಷಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ದಿನಸಿ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ತಲುಪಿಸುವಲ್ಲಿ ಮುಂಚೂಣಿಯಲ್ಲಿದೆ. ಕುನಾಲ್ ಕಾಮ್ರಾ ಅವರು ಇಂತಹ ಆನ್ ಲೈನ್ ಪ್ಲಾಟ್ ಫಾರ್ಮ್ಗಳ ಸಮಸ್ಯೆಗಳ ಬಗ್ಗೆ ಪೋಸ್ಟ್ ನಲ್ಲಿ ಗಮನವನ್ನು ಸೆಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News